ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಟಾಫಿ ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇಬ್ಬರು ನಾಯಕರ ಸ್ನೇಹದ ಕ್ಷಣಗಳು ಮತ್ತೆ ನೆಟ್ಟಿಗರ ಗಮನ ಸೆಳೆದಿದ್ದು, #Melody ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ಗೆ ಬಂದಿದೆ.
ವೈರಲ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ
ವಿಡಿಯೋದಲ್ಲಿ ಪ್ರಧಾನಿ ಮೋದಿ ನಗುಮುಖದೊಂದಿಗೆ ಮೆಲೋನಿ ಅವರಿಗೆ ಮೆಲೋಡಿ ಟಾಫಿ ನೀಡುತ್ತಿರುವ ದೃಶ್ಯ ಕಂಡುಬಂದಿದೆ. ಇದನ್ನು ಕಂಡ ನೆಟ್ಟಿಗರು ಫನ್ನಿ ಮೀಮ್ಸ್ ಹಾಗೂ ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಇಬ್ಬರ ಸ್ನೇಹದ ಬಗ್ಗೆ ಚರ್ಚೆಗಳು ಜೋರಾಗಿವೆ.
ಇದನ್ನೂ ಓದಿ:
ಪಾರ್ಲೆ ಕಂಪನಿಯಿಂದ ಸ್ಪೆಷಲ್ ಪ್ರತಿಕ್ರಿಯೆ
ಮೆಲೋಡಿ ಟಾಫಿ ತಯಾರಕ ಪಾರ್ಲೆ ಪ್ರಾಡಕ್ಟ್ಸ್ ಕೂಡ ಈ ಟ್ರೆಂಡ್‌ಗೆ ಸ್ಪಂದಿಸಿದೆ. ಕಂಪನಿ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೈರಲ್ ವಿಡಿಯೋವನ್ನು ಮರುಹಂಚಿಕೊಂಡು, “1983ರಿಂದ ಸಂಬಂಧಗಳನ್ನು ಸಿಹಿಗೊಳಿಸುತ್ತಿದ್ದೇವೆ” ಎಂದು ಬರೆದುಕೊಂಡಿದೆ.
‘ಮೆಲೋಡಿ’ಗೆ ಹೆಚ್ಚಿದ ಕ್ರೇಜ್
ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಕೂಡ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. “ಇನ್ನು ಅಂಗಡಿಗಳಲ್ಲಿ ಮೆಲೋಡಿ ಸಿಗೋದೇ ಕಷ್ಟ” ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, “ಮೆಲೋಡಿ ಮಾರಾಟ ಈಗ ಗಗನಕ್ಕೇರುತ್ತದೆ” ಎಂದು ಇನ್ನೂ ಹಲವರು ಮಜಾದಾಯಕ ಪ್ರತಿಕ್ರಿಯೆ ನೀಡಿದ್ದಾರೆ.



