May 21, 2026
Thursday, May 21, 2026
spot_img

ಕೊಡಗಿನ ದುಬಾರೆ ದುರಂತ ಬೆನ್ನಲ್ಲೇ ಅಲರ್ಟ್: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ತಾತ್ಕಾಲಿಕ ಬಂದ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ ಇತ್ತೀಚೆಗೆ ನಡೆದ ಆನೆಗಳ ಕಾಳಗ ಹಾಗೂ ಪ್ರವಾಸಿ ಮಹಿಳೆಯ ಸಾವಿನ ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರವನ್ನು ತಾತ್ಕಾಲಿಕವಾಗಿ ಸಂಪೂರ್ಣ ಬಂದ್ ಮಾಡಲಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ನಿಷೇಧ

ಈಗಾಗಲೇ ಸಕ್ರೆಬೈಲು ಬಿಡಾರದಲ್ಲೂ ಪ್ರವಾಸಿಗರಿಂದ ಆನೆಗಳ ಸ್ನಾನ ಮಾಡಿಸುವುದಕ್ಕೆ ನಿಷೇಧ ಹೇರಲಾಗಿತ್ತು. ಕೇವಲ ದೂರದಿಂದ ಆನೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶವನ್ನುನಿಷೇಧಿಸಲಾಗಿದೆ.

ಎಸ್‌ಒಪಿ ಜಾರಿಗೆ ಕಾಯುತ್ತಿರುವ ಅಧಿಕಾರಿಗಳು

ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಸರಕಾರದಿಂದ ಆನೆ ಬಿಡಾರಗಳ ನಿರ್ವಹಣೆಗೆ ಕುರಿತು ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ನಿಯಮಗಳು ಜಾರಿಗೆ ಬರುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಇತ್ತ ಬೇಸಿಗೆಯ ರಜೆಯಲ್ಲಿ ಪ್ರತಿದಿನ ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದು, ಇದೀಗಆನೆ ಬಿಡಾರ ಬಂದ್ ಆಗಿರುವುದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !