September 30, 2026
Wednesday, September 30, 2026
spot_img

ಸಮಂತಾ ಜೀವನದ ಹೊಸ ಅಧ್ಯಾಯ: ಸಿಂಪಲ್ ಬೇಬಿಶವರ್ ಸಂಭ್ರಮಕ್ಕೆ ಫ್ಯಾನ್ಸ್ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ರುತ್ ಪ್ರಭು ತಮ್ಮ ಜೀವನದ ಹೊಸ ಅಧ್ಯಾಯವನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಮಂತಾ ಮತ್ತು ಪತಿ ರಾಜ್ ನಿಡಿಮೋರು ಕುಟುಂಬದವರ ಸಮ್ಮುಖದಲ್ಲಿ ಖಾಸಗಿ ಬೇಬಿ ಶವರ್ ಆಚರಿಸಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಆಪ್ತ ಕುಟುಂಬ ಸದಸ್ಯರು ಮತ್ತು ಬಂಧುಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮಂತಾ ಮರೂನ್ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರೆ, ರಾಜ್ ನಿಡಿಮೋರು ಸಹ ಅದೇ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡರು. ಸರಳತೆ ಮತ್ತು ಸಂಪ್ರದಾಯದ ಸಂಯೋಜನೆಯಾದ ಈ ಕಾರ್ಯಕ್ರಮ ಅಭಿಮಾನಿಗಳ ಗಮನ ಸೆಳೆದಿದೆ.

ಇದನ್ನೂ ಓದಿ:

ಫೋಟೋಗಳಿಗೆ ಅಭಿಮಾನಿಗಳ ಮೆಚ್ಚುಗೆ

ಬೇಬಿ ಶವರ್‌ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ತಾಯಿ ಆಗಲಿರುವ ಸಮಂತಾ ಅವರ ಹೊಸ ಜೀವನದ ಹಂತಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ‘ಮಾ ಇಂಟಿ ಬಂಗಾರಂ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ಜಾಗತಿಕವಾಗಿ ₹100 ಕೋಟಿಗೂ ಹೆಚ್ಚು ಗಳಿಕೆ ದಾಖಲಿಸಿದೆ. ಮಹಿಳಾ ಪ್ರಧಾನ ತೆಲುಗು ಚಿತ್ರವೊಂದು ಈ ಸಾಧನೆ ಮಾಡಿರುವುದು ವಿಶೇಷ. ಈ ಚಿತ್ರದ ನಿರ್ಮಾಣದಲ್ಲೂ ಸಮಂತಾ ಮತ್ತು ರಾಜ್ ಪಾಲುದಾರರಾಗಿದ್ದರು.

Must Read