ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಮೆಟಾ ಭಾರೀ ಪ್ರಮಾಣದ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭಿಸಿದ್ದು, ಈ ಬೆಳವಣಿಗೆ ಜಾಗತಿಕ ಟೆಕ್ ವಲಯದಲ್ಲಿ ಆತಂಕ ಮೂಡಿಸಿದೆ. ಕಂಪನಿಯು ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಈ ಕ್ರಮ ಕೃತಕ ಬುದ್ಧಿಮತ್ತೆ (AI) ಕೇಂದ್ರಿತ ವ್ಯವಸ್ಥೆ ಜಾರಿಯ ಭಾಗವಾಗಿದೆ ಎನ್ನಲಾಗುತ್ತಿದೆ.
ಮಧ್ಯರಾತ್ರಿ ಬಂದ ಇಮೇಲ್ ಶಾಕ್!
ಉದ್ಯೋಗಿಗಳಿಗೆ ಸಂಸ್ಥೆಯಿಂದ ಮಧ್ಯರಾತ್ರಿ ವೇಳೆಯಲ್ಲಿ ಇಮೇಲ್ ಮೂಲಕ ವಜಾ ಮಾಹಿತಿ ನೀಡಲಾಗಿದೆ. ಕೆಲವರಿಗೆ ಕಚೇರಿಗೆ ಬರಬೇಡಿ, ಬ್ಯಾಡ್ಜ್ ನಿಷ್ಕ್ರಿಯಗೊಳಿಸಲಾಗಿದೆ, ಸಿಸ್ಟಮ್ ಪ್ರವೇಶ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಎನ್ನಲಾಗಿದೆ.
AI ಅಳವಡಿಕೆಗೆ ನಡೆದಿದೆ ದೊಡ್ಡ ಪ್ಲ್ಯಾನ್?
ಕಂಪನಿಯ ಮುಖ್ಯಸ್ಥ ಮಾರ್ಕ್ ಜುಗರ್ಬರ್ಗ್ ಈಗ AI ಅಭಿವೃದ್ಧಿಗೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದಾರೆ. ಮೆಟಾ ಈ ವರ್ಷ AI ಮೂಲಸೌಕರ್ಯ, ಡೇಟಾ ಸೆಂಟರ್ ಮತ್ತು AI ಉತ್ಪನ್ನಗಳಿಗಾಗಿ ಬಿಲಿಯನ್‌ಗಳ ಡಾಲರ್ ವೆಚ್ಚ ಮಾಡಲು ಯೋಜಿಸಿದೆ ಎಂದು ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಕಡಿತದ ಜೊತೆಗೆ ಕಂಪನಿ 7,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಸ AI ಕೇಂದ್ರಿತ ತಂಡಗಳಿಗೆ ವರ್ಗಾಯಿಸುತ್ತಿದೆ ಎನ್ನಲಾಗಿದೆ. ಸಣ್ಣ ತಂಡಗಳು, ಕಡಿಮೆ ಮ್ಯಾನೇಜ್‌ಮೆಂಟ್ ಪದರಗಳು ಮತ್ತು ವೇಗವಾದ ಕಾರ್ಯವಿಧಾನಕ್ಕೆ ಕಂಪನಿ ಒತ್ತು ನೀಡುತ್ತಿದೆ. ಈ ಬೆಳವಣಿಗೆಯ ಬಳಿಕ ಟೆಕ್ ಉದ್ಯೋಗಿಗಳಲ್ಲಿ ಭಾರೀ ಅನಿಶ್ಚಿತತೆ ಮತ್ತು ಆತಂಕ ಹೆಚ್ಚಾಗಿದೆ.



