May 22, 2026
Friday, May 22, 2026
spot_img

ದಿನಭವಿಷ್ಯ: ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಜೊತೆಯೇ ನಯವಂಚಕರಿದ್ದಾರೆ ಜೋಪಾನ!

ಮೇಷ
ಕುಟುಂಬದ ಹಿತಕ್ಕೆ  ಹೆಚ್ಚು ಕಾಳಜಿ ವಹಿಸಿ. ಉದ್ಯಮಿಗಳು ಇಂದು ರಿಸ್ಕ್ ತೆಗೆದುಕೊಳ್ಳದಿರಿ. ದಿನದಂತ್ಯಕ್ಕೆ ತುಸು ನಿರಾಳ ಬೆಳವಣಿಗೆ.    
ವೃಷಭ
  ನಿಮ್ಮ ಗುಣಾತ್ಮಕ ನಡವಳಿಕೆ ಯಶಸ್ಸಿಗೆ ಕಾರಣವಾಗಲಿದೆ. ಎಲ್ಲರಿಂದ ದೂರವಾಗಿ  ಇರುವುದನ್ನು ಬಿಡಿ.  ಎಲ್ಲರ ಜತೆ ಸೇರಿ.                
ಮಿಥುನ
ವ್ಯಕ್ತಿಯೊಬ್ಬರ ಜತೆ ವಿಶ್ವಾಸಭರಿತ ಬಾಂಧವ್ಯ ಬೆಳೆಯಬಹುದು. ಆದಾಯದಲ್ಲಿ ಹೆಚ್ಚಳ. ಮನೆಯ ಸಮಸ್ಯೆ ಪರಿಹಾರದಿಂದ ನೆಮ್ಮದಿ.      
ಕಟಕ
ನಿಮ್ಮ ಶ್ರಮದಿಂದ ಉದ್ಯೋಗದಲ್ಲಿ ಯಶ.     ಆರ್ಥಿಕ ಉನ್ನತಿ. ಪ್ರೀತಿಯ ವಿಷಯದಲ್ಲಿ ಎಚ್ಚರದ ಹೆಜ್ಜೆ ಇಡಿ. ಅಪಸ್ವರ ಏಳದಂತೆ ನೋಡಿಕೊಳ್ಳಿ.    
ಸಿಂಹ
ಚಿಪ್ಪಿನಿಂದ ಹೊರಬನ್ನಿ. ಎಲ್ಲರ ಜತೆ ಮುಕ್ತವಾಗಿ ಬೆರೆಯಿರಿ. ಎಲ್ಲರನ್ನು ಸಂಶಯದಿಂದ ನೋಡಬೇಡಿ. ವಿಶ್ವಾಸ ಮುಖ್ಯ ತಿಳಿಯಿರಿ.  
ಕನ್ಯಾ
ವೃತ್ತಿ ಒತ್ತಡದಿಂದ ಇಂದು ಮುಕ್ತಿ. ಆಪ್ತರ ಜತೆ ಬೆರೆಯುವ ಅವಕಾಶ. ನಿಮ್ಮನ್ನು ಶ್ಲಾಘಿಸುವ ನಿರ್ವಹಣೆ ತೋರುವಿರಿ. ಖಾಸಗಿ ಚಿಂತೆ ಪರಿಹಾರ.        
ತುಲಾ
ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಬೀಳಲಿದೆ. ಮಾನಸಿಕ ಒತ್ತಡದಿಂದ ನೆಮ್ಮದಿ ಹಾಳು. ಕೌಟುಂಬಿಕ ಬಿಕ್ಕಟ್ಟು ಶಮನಕ್ಕೆ ಯತ್ನಿಸಿ.      
ವೃಶ್ಚಿಕ
ವೃತ್ತಿಯಲ್ಲಿ  ಅಚ್ಚರಿಯ ಬೆಳವಣಿಗೆ.      ಅನ್ಯರ ಜತೆಗಿನ ವೈರವನ್ನು ದೀರ್ಘ ಎಳೆಯಬೇಡಿ. ಕೌಟುಂಬಿಕ ನೆಮ್ಮದಿ ಹಾಳಾಗುವ ಪ್ರಸಂಗ.          
ಧನು
ಭಾವುಕತೆ ನಿಮ್ಮ ವಿವೇಕ ಮರೆಸಬಹುದು. ಸಹೋದರರಿಂದ ಸಮಸ್ಯೆ ಸೃಷ್ಟಿ. ಆಪ್ತ ಸಂಬಂಧ ಕೆಡಲಿದೆ. ಸಂಘರ್ಷ ಉಲ್ಬಣಿಸಬೇಡಿ.              
ಮಕರ
 ಒತ್ತಡದ ಬದುಕಿಂದ ವಿರಾಮ ಪಡೆಯಿರಿ. ಆ ಮೂಲಕ ಮಾನಸಿಕ ನೆಮ್ಮದಿ ಪಡಕೊಳ್ಳಿ. ಪ್ರೇಮದ ಅಹವಾಲು ಮಂಡನೆ -ಲ ನೀಡದು.          
ಕುಂಭ
 ವೃತ್ತಿ ಕ್ಷೇತ್ರದಲ್ಲಿ ನಯವಂಚಕರ ಬಗ್ಗೆ ಎಚ್ಚರದಿಂದಿರಿ. ಕುಟುಂಬದಲ್ಲಿ ಸಮಸ್ಯೆ ಉಂಟಾದೀತು. ಪ್ರೀತಿಯ ವ್ಯವಹಾರದಲ್ಲಿ ಬಿಕ್ಕಟ್ಟು.          
 ಮೀನ
   ಆದಾಯ ಗಳಿಕೆಯ ಹೊಸ ದಾರಿ ತೋರಲಿದೆ. ನಿಮ್ಮ ವ್ಯಕ್ತಿತ್ವ ಇತರರ ಮೆಚ್ಚುಗೆ ಗಳಿಸುವುದು. ವಿವಾಹಿತರ ಪಾಲಿಗೆ ಶುಭ ಬೆಳವಣಿಗೆ.    

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !