May 23, 2026
Saturday, May 23, 2026
spot_img

ದಿನಭವಿಷ್ಯ: ಕುಟುಂಬದಲ್ಲಿ ನೆಮ್ಮದಿ ಬೇಕಾದರೆ ಇಂದು ಮೌನ ತಾಳುವುದು ಉತ್ತಮ!

ಮೇಷ
ಯಾವುದೇ ಕೆಲಸ ಮಾಡಲೂ ನಿರಾಸಕ್ತಿ. ಗೊಂದಲದ ಮನಸ್ಥಿತಿ. ಮನದಲ್ಲೇ ಕೊರಗುತ್ತಾ  ಕೂರಬೇಡಿ. ಆಪ್ತರ ಜತೆ ಮನಸು ಹಂಚಿಕೊಳ್ಳಿ.                    
ವೃಷಭ
ಆರೋಗ್ಯ ಸಮಸ್ಯೆ.  ಮನಸ್ಸು ವ್ಯಾಕುಲ. ಕೆಲ ವಿಚಾರಗಳಲ್ಲಿ ಅನಿಶ್ಚಿತತೆ. ವೃತ್ತಿ ಕಾರ್ಯದ ಮೇಲೆ ಹೆಚ್ಚು ಗಮನ ಕೊಡಿ. ಲೋಪ ಆಗದಂತೆ ಎಚ್ಚರ ವಹಿಸಿ.
ಮಿಥುನ
ಹೊಸ ವ್ಯವಹಾರ ಆರಂಭಿಸಲು ಸಕಾಲವಲ್ಲ. ಉಳಿತಾಯಕ್ಕೆ ಹೆಚ್ಚು ಗಮನ ಕೊಡಿ. ಕೆಲ ವ್ಯಕ್ತಿಗಳು ನಿಮ್ಮಡೆಗೆ ಅಸಹಕಾರ ತೋರುತ್ತಾರೆ.                      
ಕಟಕ
ನೀವಿಂದು ಎಂದಿನಂತಿಲ್ಲ. ಒತ್ತಡ, ಜಡತ್ವ, ನಿರಾಸಕ್ತಿ ಆವರಿಸಲಿದೆ. ನಂಬಿಕೆಗೆ ಅರ್ಹನಲ್ಲದ ವ್ಯಕ್ತಿಯನ್ನು ದೂರವಿಡಿ. ಧನವ್ಯಯ.
ಸಿಂಹ
ಕುಟುಂಬದಲ್ಲಿ ನೆಮ್ಮದಿ ಬೇಕಾದರೆ ವಾಗ್ವಾದ, ಸಂಘರ್ಷ ನಡೆಸಬೇಡಿ. ವಿದ್ಯಾರ್ಥಿ ಗಳಿಗೆ ಉನ್ನತ ಅಧ್ಯಯನಕ್ಕೆ ಉತ್ತಮ ಅವಕಾಶ.              
ಕನ್ಯಾ
ಖರ್ಚು ತುಂಬಾ ಹೆಚ್ಚಲಿದೆ. ಅನವಶ್ಯ ವಸ್ತು ಖರೀದಿ ನಿಲ್ಲಿಸಿ. ಆಹಾರದಲ್ಲಿ ನಿರ್ಲಕ್ಷ್ಯ ಹೊಟ್ಟೆ ಕೆಡಿಸಬಹುದು.   ದಂಪತಿ ಮಧ್ಯೆ ಮುನಿಸು.            
ತುಲಾ
ಕೌಟುಂಬಿಕ ಹೊಣೆಗಾರಿಕೆ ಹೆಚ್ಚು ಒತ್ತಡ ಹೇರಬಹುದು. ಮನಸ್ಸು ಕೆಡಿಸಬಹುದು. ನಗುತ್ತಲೇ ನಿಮ್ಮ ಹೊಣೆ ನಿರ್ವಹಿಸಲು ಪ್ರಯತ್ನಿಸಿ.              
ವೃಶ್ಚಿಕ
ಜಾಗ, ವಾಹನ ಖರೀದಿಗೆ ಸೂಕ್ತ ದಿನವಲ್ಲ. ವೃತ್ತಿಯಲ್ಲಿ ಪ್ರತಿಕೂಲ ಸನ್ನಿವೇಶ. ಮಾತಿನ ಮೇಲೆ ನಿಯಂತ್ರಣವಿರಲಿ. ವಾಗ್ವಾದಕ್ಕೆ ಇಳಿಯದಿರಿ.
ಧನು
ಮಹತ್ವದ ಸುದ್ದಿಗೆ ಕಾಯುತ್ತಿದ್ದರೆ ಇಂದು ಸಾಕಾರ. ಹರ್ಷ ಹೆಚ್ಚಿಸುವ ಬೆಳವಣಿಗೆ. ಅನಾರೋಗ್ಯ ಕಾಡಿದರೆ ನಿರ್ಲಕ್ಷ್ಯ ಬೇಡ. ವೈದ್ಯರನ್ನು ಕಾಣಿರಿ.      
ಮಕರ
ಪ್ರೀತಿಯಲ್ಲಿ ನಿರಾಶೆ. ಸೂಕ್ತ ಸ್ಪಂದನೆ ದೊರಕದು. ವ್ಯವಹಾರದಲ್ಲಿ ತೊಡಕು. ಆಪ್ತರಿಂದಲೇ ಟೀಕೆ. ಭಾವನೆಗೆ ದಾಸರಾಗದಿರಿ. ಪ್ರಾಕ್ಟಿಕಲ್ ಆಗಿರಿ.      
ಕುಂಭ
ಸಣ್ಣ ವಿಷಯಕ್ಕೂ ಅತಿಯಾಗಿ ಸ್ಪಂದಿಸುವಿರಿ. ಭಾವಾವೇಶ ನಿಯಂತ್ರಿಸಿ. ಅನ್ಯರ ವಿಷಯದಲ್ಲಿ ಮೂಗು ತೂರಿಸಬೇಡಿ.  ಕೌಟುಂಬಿಕ ಅಸಹಕಾರ.                  
ಮೀನ
ಮಾನಸಿಕ ಬಸವಳಿಕೆ. ಇದರಿಂದ ದೇಹದ ಮೇಲೂ ಪರಿಣಾಮ. ನಿಮ್ಮ ಸುತ್ತ ವಂಚನೆಯ ಪರಿಸರವಿದೆ. ಅದರಿಂದ ದೂರ ಸರಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !