May 23, 2026
Saturday, May 23, 2026
spot_img

ʼಪ್ರಧಾನಿ ಮೋದಿಗೆ ಎಲ್ಲವೂ ಸಾಧ್ಯ ತಾನೆ? ಯುದ್ಧ ಯಾಕೆ ಇನ್ನೂ ನಿಂತಿಲ್ಲ? ಇಂಧನ ಬೆಲೆ ಯಾಕೆ ಇಳಿಸಿಲ್ಲ?ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ಪವರ್‌ಫುಲ್‌ ನಾಯ, ಅವರಿಂದ ಮಾಡೋಕೆ ಆಗಲ್ಲ ಅನ್ನೋದು ಏನೂ ಇಲ್ಲ ಅನ್ನೋದಾದ್ರೆ ಈ ಯುದ್ಧ ಯಾಕೆ ನಿಂತಿಲ್ಲ? ಇಂಧನಗಳ ಬೆಲೆ ಯಾಕೆ ಕಡಿಮೆ ಆಗ್ತಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಸಿದ್ದಾರೆ.

ಬೇರೆ ದೇಶದ ಪ್ರಧಾನಿಗಳ ಜೊತೆ ರೀಲ್ಸ್‌ ಮಾಡೋದ್ರಲ್ಲಿ ಬ್ಯುಸಿ ಇರುವ ಪ್ರಧಾನಿ ಈಗ ಸೋಶಿಯಲ್‌ ಮೀಡಿಯಾ ಇನ್ಫ್ಲುಯೆನ್ಸರ್‌ ಆಗಿದ್ದಾರೆ. ಜನರು ಕಷ್ಟದಲ್ಲಿದ್ದಾರೆ. ಆ ಕಷ್ಟದ ಮೇಲೆ ಮತ್ತೆ ಇಂಧನ ಬೆಲೆ ಏರಿಕೆ ಕಷ್ಟ ಕೊಡಲಾಗ್ತಿದೆ. ಜನ ಎಲ್ಲಿವರೆಗೂ ಅಂತ ತಡ್ಕೋತಾರೆ ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಒಂದಾ ಎರಡಾ ಎಷ್ಟು ಸಮಸ್ಯೆ ಇದೆ ನೀವೇ ಹೇಳಿ, ಇಂಥ ಸಂದರ್ಭದಲ್ಲಿ ಪ್ರಧಾನಿಯಾದವರು ಜನರ ಬರ್ಡನ್‌ ಕಡಿಮೆ ಮಾಡಬೇಕು. ಅದನ್ನು ಬಿಟ್ಟು ವಿದೇಶಗಳಿಗೆ ಪ್ರವಾಸ ಹೋಗೋದು, ರೀಲ್ಸ್‌ ಮಾಡುತ್ತಾ ಕೂತರೆ ಹೇಗೆ ನಡೆಯುತ್ತೆ? ಹೋದ ಕಡೆಯೆಲ್ಲಾ ನಮ್ಮ ಆರ್ಥಿಕ ಸ್ಥಿತಿ ಚನಾಗಿದೆ ಎಂದು ಹೇಳ್ತಾರೆ. ಅದೇ ಹೇಳಿಕೆ ಎಲ್ಲ ಕಡೆ ಬರುತ್ತದೆ. ಆದರೆ ಜನಸಾಮಾನ್ಯರಿಗೆ ಏನು ಸಿಕ್ಕಿದೆ ಇದರಿಂದ?

ಒಂದೇ ವಾರದಲ್ಲಿ ಮೂರು ಸಲ ಪೆಟ್ರೋಲ್‌ ರೇಟ್‌ ಹೆಚ್ಚು ಮಾಡ್ತಿದ್ದಾರೆ. ಜನ ಹೇಗೆ ಜೀವನ ಮಾಡಬೇಕು? ಗಿಗ್‌ ವರ್ಕರ್ಸ್‌, ದಿನಾ ಆಫೀಸ್‌ ಹೋಗೋರು ಮೂರು ದಿನಕ್ಕೊಂದು ಸಲ ಪೆಟ್ರೋಲ್‌ ಹಾಕಿಸ್ಬೇಕಾ? ಎಂದು ಗರಂ ಆಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !