May 24, 2026
Sunday, May 24, 2026
spot_img

‘ಸೋತರೂ ಬೆಸ್ಟ್ ಆಟ’: ಸೋಲಿನ ನಡುವೆಯೂ ಯುವ ಆಟಗಾರರ ಪ್ರದರ್ಶನ ಮೆಚ್ಚಿದ ಪಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಮಹತ್ವದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ, ಲಕ್ನೋ ನಾಯಕ ರಿಷಭ್ ಪಂತ್ ತಂಡದ ಸೋಲಿನ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 196 ರನ್ ಗಳಿಸಿದರೂ, ಪಂಜಾಬ್ ಕೇವಲ 18 ಓವರ್‌ಗಳಲ್ಲಿ ಗುರಿ ತಲುಪಿ 7 ವಿಕೆಟ್‌ಗಳ ಜಯ ದಾಖಲಿಸಿತು.

ಈ ಪಿಚ್‌ನಲ್ಲಿ ಟಾಸ್ ಮುಖ್ಯ

ಪಂದ್ಯದ ಬಳಿಕ ಮಾತನಾಡಿದ ರಿಷಭ್ ಪಂತ್, ನಾವು ಇನ್ನೂ 5-10 ರನ್ ಹೆಚ್ಚಾಗಿ ಗಳಿಸಬಹುದಿತ್ತು. ಆದರೂ ಈ ಮೊತ್ತ ಸಾಕಾಗುತ್ತಿತ್ತು. ಆದರೆ ಏಕಾನಾ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಅದಕ್ಕಾಗಿಯೇ ಇಲ್ಲಿ ಟಾಸ್ ದೊಡ್ಡ ಪಾತ್ರ ವಹಿಸುತ್ತದೆ, ಎಂದು ಹೇಳಿದರು.

ಇದನ್ನೂ ಓದಿ:

ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ

ಸೋಲಿನ ನಡುವೆಯೂ ಜೋಶ್ ಇಂಗ್ಲಿಸ್, ಪ್ರಿನ್ಸ್ ಯಾದವ್, ಮೊಹಮ್ಮದ್ ಶಮಿ ಮತ್ತು ಮೊಹ್ಸಿನ್ ಖಾನ್ ಪ್ರದರ್ಶನವನ್ನು ಪಂತ್ ಶ್ಲಾಘಿಸಿದರು. ಯುವ ಆಟಗಾರರು ಉತ್ತಮ ಭವಿಷ್ಯ ತೋರಿದ್ದಾರೆ ಎಂದು ಹೇಳಿದರು. ಮಿಚೆಲ್ ಮಾರ್ಷ್ ಕೊಡುಗೆಯನ್ನೂ ನೆನಪಿಸಿಕೊಂಡರು.

ಪರೋಕ್ಷವಾಗಿ ಮ್ಯಾನೇಜ್‌ಮೆಂಟ್‌ಗೆ ಟಾಂಗ್?

ಕೆಲವೊಮ್ಮೆ ಜವಾಬ್ದಾರಿ ಇಲ್ಲದ ಯೋಜನೆಗಳು ಪರಿಸ್ಥಿತಿಯನ್ನು ಕಠಿಣಗೊಳಿಸುತ್ತವೆ ಎಂಬ ಪಂತ್ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ಬ್ಯಾಟಿಂಗ್ ಕ್ರಮಾಂಕದ ನಿರಂತರ ಬದಲಾವಣೆಗಳು ತಂಡದ ಹಿನ್ನಡೆಗೆ ಕಾರಣವಾಗಿದ್ದವು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !