ಕೆಂಪು ಕಲ್ಲು ಸಕ್ಕರೆ ಅಥವಾ ಮಿಶ್ರಿ ಎಂಬುದು ಯಾವುದೇ ರಾಸಾಯನಿಕ ಸಂಸ್ಕರಣೆಗೆ ಒಳಪಡದ, ಕಬ್ಬಿನ ಹಾಲಿನಿಂದ ನೈಸರ್ಗಿಕವಾಗಿ ತಯಾರಾಗುವ ಒಂದು ಸಾಂಪ್ರದಾಯಿಕ ಸಿಹಿ ಪದರ್ಥಾವಾಗಿದೆ. ಬಿಳಿ ಸಕ್ಕರೆಗೆ ಹೋಲಿಸಿದರೆ ಇದು ಆರೋಗ್ಯಕ್ಕೆ ಅತ್ಯಂತ ಹಿತಕರವಾಗಿದ್ದು, ಭಾರತೀಯ ಆಯುರ್ವೇದದಲ್ಲಿ ಇದನ್ನು ಕೇವಲ ಸಿಹಿಗಾಗಿ ಮಾತ್ರವಲ್ಲದೆ ಒಂದು ಅತ್ಯುತ್ತಮ ಔಷಧಿಯಾಗಿಯೂ ಬಳಸಲಾಗುತ್ತದೆ. ದೇಹವನ್ನು ತಂಪುಗೊಳಿಸುವ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ನೈಸರ್ಗಿಕ ಗುಣಗಳು ಇದರಲ್ಲಿ ಅಡಗಿವೆ.
ಕೆಂಪು ಕಲ್ಲು ಸಕ್ಕರೆಯ ಪ್ರಮುಖ ಆರೋಗ್ಯ ಪ್ರಯೋಜನಗಳು:
ಇದು ಪ್ರಕೃತಿಯಲ್ಲಿ ತಂಪು ಗುಣವನ್ನು ಹೊಂದಿದೆ. ಬೇಸಿಗೆಯಲ್ಲಿ ಅಥವಾ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಇದನ್ನು ಸೇವಿಸುವುದರಿಂದ ದೇಹ ತಂಪಾಗುತ್ತದೆ.
ಆಯಾಸ ಅಥವಾ ನಿಶ್ಯಕ್ತಿ ಎನಿಸಿದಾಗ ಕೆಂಪು ಕಲ್ಲು ಸಕ್ಕರೆ ತುಂಡನ್ನು ಬಾಯಿಗೆ ಹಾಕಿಕೊಂಡರೆ ದೇಹಕ್ಕೆ ತಕ್ಷಣದ ಗ್ಲುಕೋಸ್ ಮತ್ತು ಶಕ್ತಿ ಸಿಗುತ್ತದೆ.
ಊಟದ ನಂತರ ಕೆಂಪು ಕಲ್ಲು ಸಕ್ಕರೆಯನ್ನು ಸೋಂಪಿನೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಅಸಿಡಿಟಿ ದೂರವಾಗುತ್ತದೆ.
ಇದನ್ನೂ ಓದಿ:
ಒಣ ಕೆಮ್ಮು ಮತ್ತು ಗಂಟಲು ಕೆರೆತ ಇದ್ದಾಗ ಕೆಂಪು ಕಲ್ಲು ಸಕ್ಕರೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ಅದರ ರಸವನ್ನು ನುಂಗುವುದರಿಂದ ಗಂಟಲಿಗೆ ಆರಾಮ ಸಿಗುತ್ತದೆ.
ಆಯುರ್ವೇದದ ಪ್ರಕಾರ, ಕೆಂಪು ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಸುಧಾರಿಸುತ್ತದೆ ಮತ್ತು ರಕ್ತಹೀನತೆ ಕಡಿಮೆಯಾಗುತ್ತದೆ.



