July 22, 2026
Wednesday, July 22, 2026
spot_img

ಮಿಂಚು, ಗಾಳಿ ಸಹಿತ ಭಾರೀ ಮಳೆ: ಮುಂಡಗೋಡ-ಯಲ್ಲಾಪುರ ರಸ್ತೆಗೆ ಉರುಳಿದ ಮರ

ಹೊಸ ದಿಗಂತ ವರದಿ, ಮುಂಡಗೋಡ:

ಮುಂಡಗೋಡ ಪಟ್ಟಣ ಸಹಿತ ಗ್ರಾಮೀಣ ಭಾಗಗಳಲ್ಲಿ ಮಿಂಚು, ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಇದರ ಪರಿಣಾಮ ಹಲವು ಅವಾಂತರಗಳು ಸೃಷ್ಟಿಯಾಗಿದೆ.

ವಾಹನ ಸಂಚಾರಕ್ಕೆ ಬ್ರೇಕ್

ಗಾಳಿ ಮಳೆಗೆ ಮುಂಡಗೋಡ-ಯಲ್ಲಾಪುರ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೇಯ ಮಧ್ಯಭಾಗದಲ್ಲೇ ಅಡ್ಡಲಾಗಿ ಬಿದ್ದ ಪರಿಣಾಮ ಮಾರ್ಗದಲ್ಲಿ ಕೆಲ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಬಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ಮಳೆಯೊಂದಿಗೆ ಬೀಸಿದ ಗಾಳಿಯ ಆರ್ಭಟಕ್ಕೆ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ ಕಂಬಗಳು ಬಿದ್ದಿದ್ದು, ವಿದ್ಯುತ್ ವ್ಯತ್ಯಯವಾಗಿದೆ.‌

ಸ್ಥಳಿಯರ ಆಕ್ರೋಶ

ಸುಮಾರು ನಾಲ್ಕು ಗಂಟೆ ಸುರಿದ ಮಳೆಯಿಂದ ಪಟ್ಟಣದ ರಸ್ತೆ ಚರಂಡಿಗಳು ತುಂಬಿ ಹರಿದವು. ಮಳೆಗಾಲ ಆರಂಭವಾಗುವ ಮುನ್ನವೆ ಚರಂಡಿಗಳನ್ನು ಸ್ವಚ್ಛತೆಗೊಳಿಸದೆ ಇರುವುದರಿಂದ ಚರಂಡಿಗಳಲ್ಲಿ ನೀರು ನಿಂತಿರುವುದು ಕಂಡು ಸ್ಥಳಿಯರು ಗ್ರಾಮ ಪಂಚಾಯತ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !