November 15, 2026
Sunday, November 15, 2026
spot_img

ಕುಟುಂಬ ಪ್ರವಾಸ ದುರಂತದಲ್ಲಿ ಅಂತ್ಯ: ಸ್ನಾನಕ್ಕೆಂದು ನೀರಿಗಿಳಿದ ವ್ಯಕ್ತಿ ಮುಳುಗಿ ಸಾ*ವು

ಹೊಸದಿಗಂತ ವರದಿ ಯಲ್ಲಾಪುರ:

ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಚೆಕ್‌ಡ್ಯಾಮ್‌ನಲ್ಲಿ ಸ್ನಾನಕ್ಕೆಂದು ಇಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಅರಬೈಲ್ ಗ್ರಾಮದ ಡಬ್ಗೂಳಿಯಲ್ಲಿ ಭಾನುವಾರ ನಡೆದಿದೆ.

ಪಟ್ಟಣದ ಶಾರದಾಗಲ್ಲಿಯ ನಿವಾಸಿ, ಸೊನಗಾರ ವೃತ್ತಿಯ ಸುಬ್ರಾಯ ಶ್ರೀನಿವಾಸ ಶೇಟ್ (54) ಮೃತರು.

ಭಾನುವಾರ ಕುಟುಂಬದೊಂದಿಗೆ ಅರಬೈಲ್ ಗ್ರಾಮದ ಸಮೀಪ ಪ್ರವಾಸಕ್ಕೆ ತೆರಳಿದ್ದ ಅವರು, ಡಬ್ಗೂಳಿ ಹಳ್ಳದ ಚೆಕ್‌ಡ್ಯಾಮ್ ಬಳಿ ಕುಟುಂಬದವರೊಂದಿಗೆ ಊಟ ಮಾಡಿದ್ದರು. ಬಳಿಕ ಸಂಜೆ ಸುಮಾರು 4.30ರ ವೇಳೆಗೆ ಸ್ನಾನ ಮಾಡಲು ಚೆಕ್‌ಡ್ಯಾಮ್‌ನ ನೀರಿಗೆ ಇಳಿದಿದ್ದರು.

ಈಜಲು ಬಾರದ ಸುಬ್ರಾಯ ಅವರು ಆಕಸ್ಮಿಕವಾಗಿ ಆಳವಾದ ನೀರಿನ ಪ್ರದೇಶಕ್ಕೆ ತೆರಳಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಅಜೀತ್ ಸುಬ್ರಾಯ ಶೇಟ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Must Read

Skip to toolbar