ಹೊಸ ದಿಗಂತ ಡಿಜಿಟಲ್ ಡೆಸ್ಕ್: .
ಪ್ರಧಾನಿ ಮೋದಿ ಅವರಿಗೆ ಮಕ್ಕಳು ಅಂದರೆ ತುಂಬಾ ಇಷ್ಟ ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಅನೇಕ ಬಾರಿ ಮೋದಿ ಅವರು ಮಕ್ಕಳ ಜೊತೆ ಸಮಯ ಕಳೆಯುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಅದೇ ರೀತಿ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ಕುಟುಂಬದ ಭೇಟಿ ವೇಳೆ ಮೋದಿ ಕೆಲ ಹೊತ್ತು ಸಚಿವರ ಇಬ್ಬರು ಮಕ್ಕಳ ಜೊತೆ ಸಮಯ ಕಳೆದಿದ್ದು, ಈ ಕುರಿತ ಚಿತ್ರಗಳು ವೈರಲ್ ಆಗುತ್ತಿದೆ.
ಟೇಬಲ್ ಮೇಲೆ ಕೂರಿಸಿ ಮಾತು
ಪ್ರಧಾನಿ ಕಚೇರಿಯಲ್ಲಿ ತಮ್ಮ ಕೆಲಸ ನಡುವೆ ಮೋದಿ, ರಾಮ್ ಮೋಹನ್ ನಾಯ್ಡು ಮಗಳು ಹಾಗೂ ಮಗ ಇಬ್ಬರ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ತಮ್ಮ ಟೇಬಲ್ ಮೇಲೆ ಸಚಿವರ ಮಗನ ಕೂರಿಸಿಕೊಂಡು ಮಾತನಾಡಿದರು. ನಾಯ್ಡು ಮಗಳಿಗೆ ಶುಭಕೋರಿ ಸಹಿ ಹಾಕಿ ಪುಸ್ತಕವನ್ನು ನೀಡಿದ್ದಾರೆ.

ನನ್ನ ಯಂಗ್ ಫ್ರೆಂಡ್ಸ್
ಈ ಕುರಿತು ಖುದ್ದು ಮೋದಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದುಯುವ ಇಬ್ಬರು ಗೆಳೆಯರು ಸೇವಾ ತೀರ್ಥ ಕಚೇರಿಗೆ ಆಗಮಿಸಿದ್ದರು ಎಂದು ಮಕ್ಕಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪುಟಾಣಿಗಳನ್ನು ‘ಯಂಗ್ ಫ್ರೆಂಡ್ಸ್’ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಅತೀವ ಸಂತಸ ವ್ಯಕ್ತಪಡಿಸಿದ ರಾಮ್ ಮೋಹನ್
ರಾಮ್ ಮೋಹನ್ ನಾಯ್ಡು ಸಂತಸ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯನ್ನು ತಮ್ಮ ಇಡೀ ಕುಟುಂಬ ಭೇಟಿಯಾಗಿ ಮಾತುಕತೆ ನಡೆಸಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಮೋದಿ ಭೇಟಿ, ಅಶೀರ್ವಾದ ಅತೀವ ಸಂತಸ ನೀಡಿದೆ ಎಂದಿದ್ದಾರೆ.




