August 4, 2026
Tuesday, August 4, 2026
spot_img

VIRAL | ಹುಳುಕಾಗಿರುವ ಹಲ್ಲನ್ನು ಹಾಗೇ ಬಿಟ್ಟು, ಸರಿ ಇರೋ ಹಲ್ಲನ್ನು ಕಿತ್ತು ಕಳಿಸಿದ ಡಾಕ್ಟ್ರಪ್ಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಜ್ಮೀರ್‌ನ ಆಸ್ಪತ್ರೆಯೊಂದರಲ್ಲಿ ವೈದ್ಯರಿಂದ ಎಡವಟ್ಟಾಗಿದೆ! ವೈದ್ಯರೊಬ್ಬರು ಮಹಿಳೆಯ ಹುಳುಕು ಹಲ್ಲನ್ನು ತೆಗೆಯುವ ಬದಲು ಸರಿಯಾದ ಹಲ್ಲನ್ನು ಕಿತ್ತು ಕಳಿಸಿದ್ದಾರೆ.

ಜವಾಹರ್‌ಲಾಲ್‌ ನೆಹರು ಆಸ್ಪತ್ರೆಯ ದಂತ ವಿಭಾಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯ ಸರಿಯಾಗಿರುವ ಹಲ್ಲು ಕೀಳಲಾಗಿದೆ. ಇದರಿಂದ ಇಡೀ ಆಸ್ಪತ್ರೆಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಶಬಾನಾ ಎನ್ನುವವರು ಹಲ್ಲು ನೋವಿನಿಂದಾಗಿ ಆಸ್ಪತ್ರೆಗೆ ಬಂದಿದ್ದಾರೆ. ಇದನ್ನು ಸರಿ ಮಾಡಲು ಆಗದು, ಕಿತ್ತುಬಿಡೋಣ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಒಪ್ಪಿಕೊಂಡ ಶಬಾನಾಗೆ ಅನಸ್ತೇಶಿಯಾ ನೀಡಿ ಹುಳುಕು ಹಲ್ಲಿನ ಪಕ್ಕದಲ್ಲಿರುವ ಹಲ್ಲನ್ನು ವೈದ್ಯರು ಕಿತ್ತಿದ್ದಾರೆ.

ಹಲ್ಲನ್ನು ಅಲುಗಾಡಿಸುವ ವೇಳೆ ಶಬಾನಾ ಕೂಗಿಕೊಂಡಿದ್ದು, ನೋವಾಗುತ್ತಿದೆ. ಈ ಹಲ್ಲು ಅಲ್ಲ ಪಕ್ಕದ್ದು ಎಂದು ಕೂಗಿದ್ದಾರೆ. ಆದರೆ ಅವರಿವರ ಜೊತೆ ಮಾತನಾಡುತ್ತಾ ವೈದ್ಯರು ತಮ್ಮ ಕಡೆ ಗಮನ ಕೂಡ ಕೊಡಲಿಲ್ಲ ಎಂದು ಶಬಾನಾ ಆರೋಪಿಸಿದ್ದಾರೆ. ಸ್ಥಳದಲ್ಲೇ ಶಬಾನಾ ತಮ್ಮ ಕುಟುಂಬದವರ ಜೊತೆ ಪ್ರತಿಭಟನೆ ನಡೆಸಿದ್ದಾರೆ. ಸಿಬ್ಬಂದಿ ನನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಶಬಾನಾ ದೂರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !