October 16, 2026
Friday, October 16, 2026
spot_img

ಮೂರಕ್ಕೂ ಮುಕ್ತಾಯವಾಗಲಿಲ್ಲ ತೈಲ ಬೆಲೆ ಏರಿಕೆ ಶಾಕ್‌! ಮತ್ತೆ ಎರಡು ರೂಪಾಯಿ ದರ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಜನತೆಗೆ ಕೇಂದ್ರದಿಂದ ಶಾಕ್‌ ಮೇಲೆ ಶಾಕ್‌ ಸಿಗುತ್ತಲೇ ಇದೆ. ಈಗಾಗಲೇ ಪೆಟ್ರೋಲ್‌ ಡಿಸೇಲ್‌ ದರ ಏರಿಕೆಗೆ ಬೇಸತ್ತಿದ್ದ ಜನ ಅದಕ್ಕಿನ್ನೂ ಅಡ್ಜಸ್ಟ್‌ ಆಗುವ ಮುನ್ನವೇ ಮತ್ತೊಂದು ಬಾರಿ ಬೆಲೆ ಏರಿಕೆ ಆಗಿದೆ.

ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ ಶಾಕ್‌ ನೀಡಿದ್ದು, ಪೆಟ್ರೋಲ್‌ ಬೆಲೆ ಲೀಟರ್‌ಗೆ 2.61 ರೂ. ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ ಲೀಟರ್‌ಗೆ 2.71 ರೂ. ಏರಿಕೆ ಮಾಡಿದೆ. ಹತ್ತು ದಿನಗಳಲ್ಲಿ ನಾಲ್ಕನೇ ಬಾರಿ ದರ ಏರಿಕೆಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?

ರಾಜಧಾನಿ ಬೆಂಗಳೂರಿನಲ್ಲಿ ಜನ ದರ ಏರಿಕೆಯಿಂದ ಹೈರಾಣಾಗಿದ್ದಾರೆ. ಗಿಗ್‌ ವರ್ಕರ್ಸ್‌, ಡೆಲಿವರಿ ಮಾಡುವ ಜನ, ಬೈಕ್‌ ಟ್ಯಾಕ್ಸಿ ಚಲಾಯಿಸುವವರು ದರ ಏರಿಕೆಯಿಂದ ಸುಸ್ತಾಗಿದ್ದಾರೆ. ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 110.89 ರೂ. ಹಾಗೂ ಒಂದು ಲೀಟರ್‌ ಡಿಸೇಲ್‌ ಬೆಲೆ 98.80 ರೂ.ಗೆ ತಲುಪಿದೆ.

ಇದೇ ಮೇ ಮಧ್ಯದಲ್ಲಿ ಮೊದಲ ಬಾರಿಗೆ ಪೆಟ್ರೋಲ್‌ ಹಾಗೂ ಡಿಸೇಲ್‌ ದರಗಳು ಏರಿಕೆಯಾಗಿತ್ತು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದರು. ಇದರ ಮಧ್ಯವೂ ಹತ್ತು ದಿನಗಳಲ್ಲಿ ಮತ್ತೊಂದು ಬಾರಿ ಪೆಟ್ರೋಲ್‌ ದರ ಏರಿಕೆಯಾಗಿದೆ.

Must Read