ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್‌ನ ಉತ್ಸಾಹ ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದ ವಿಷಕಾರಿ ಚರ್ಚೆಗೆ ಕಾರಣವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ಬಳಿಕ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಕುಟುಂಬ ಆನ್‌ಲೈನ್ ಕಿರುಕುಳಕ್ಕೆ ಒಳಗಾಗಿದೆ. ಈ ಬಗ್ಗೆ ಅವರ ಪತ್ನಿ ಜೆಸ್ಸಿಕಾ ಹೆಡ್ ಬೇಸರ ಹೊರಹಾಕಿದ್ದಾರೆ.
ಪಂದ್ಯದಲ್ಲಿನ ವಾಗ್ವಾದವೇ ಕಾರಣ?
ಪಂದ್ಯದ ವೇಳೆ ಟ್ರಾವಿಸ್ ಹೆಡ್ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಅಭಿಮಾನಿಗಳ ಗಮನ ಸೆಳೆದಿತ್ತು. ಬಳಿಕ ಹಸ್ತಲಾಘವದ ಸಂದರ್ಭವೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಆದರೆ ಕೆಲ ಅಭಿಮಾನಿಗಳು ಆಟದ ಮಿತಿಯನ್ನು ಮೀರಿ ಆಟಗಾರರ ಕುಟುಂಬವನ್ನೇ ಗುರಿಯಾಗಿಸಿದ್ದಾರೆ.
ಕುಟುಂಬದವರ ಮೇಲೂ ದಾಳಿ
ಜೆಸ್ಸಿಕಾ ಹೆಡ್ ಮಾತನಾಡಿ, ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಗೆ ಅವಹೇಳನಕಾರಿ ಸಂದೇಶಗಳು ಬರುತ್ತಿವೆ ಎಂದು ಹೇಳಿದ್ದಾರೆ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ನೋವು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ವಿಶ್ವಕಪ್ ನೆನಪಿಸಿದ ಕಹಿ ಅನುಭವ
ಇದೇ ರೀತಿಯ ಅನುಭವ 2023ರ ವಿಶ್ವಕಪ್ ಬಳಿಕವೂ ಎದುರಾಗಿತ್ತು ಎಂದು ಜೆಸ್ಸಿಕಾ ಹೇಳಿದ್ದಾರೆ. ಟ್ರಾವಿಸ್ ಹೆಡ್ ಭಾರತ ವಿರುದ್ಧ ಶತಕ ಬಾರಿಸಿದ ಬಳಿಕ ಅವರ ಕುಟುಂಬಕ್ಕೆ ಬೆದರಿಕೆ ಸಂದೇಶಗಳು ಬಂದಿದ್ದವು ಎಂದು ತಿಳಿಸಿದ್ದಾರೆ.
‘ಅಭಿಮಾನ’ ಮೀರಬಾರದು
ಕ್ರೀಡೆಯಲ್ಲಿ ಪೈಪೋಟಿ ಸಹಜ. ಆದರೆ ಆಟಗಾರರ ಕುಟುಂಬಗಳನ್ನು ಗುರಿಯಾಗಿಸುವುದು ತಪ್ಪು ಎಂದು ಜೆಸ್ಸಿಕಾ ಹೇಳಿದ್ದಾರೆ. ಮೈದಾನದ ಪೈಪೋಟಿ ಮೈದಾನದಲ್ಲೇ ಉಳಿಯಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.



