May 25, 2026
Monday, May 25, 2026
spot_img

ಚಿತ್ರರಂಗದಿಂದ ರಣವೀರ್ ಸಿಂಗ್‌ ಬ್ಯಾನ್ ಅಂತೆ: ನೌಕರರ ಒಕ್ಕೂಟದಿಂದ ಹೊರಬಿತ್ತು ಖಡಕ್ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ‘ಡಾನ್ 3’ ಸಿನಿಮಾ ಇದೀಗ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ.

ಬಹುನಿರೀಕ್ಷಿತ ಚಿತ್ರದಿಂದ ನಟ ರಣವೀರ್ ಸಿಂಗ್ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಬಳಿಕ, ಚಿತ್ರರಂಗದ ಪ್ರಮುಖ ಕಾರ್ಮಿಕ ಒಕ್ಕೂಟ FWICE ಇದೀಗ ಅವರ ವಿರುದ್ಧ ಅಸಹಕಾರ ನಿಲುವು ತೆಗೆದುಕೊಂಡಿದೆ. ಈ ಬೆಳವಣಿಗೆ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಶೂಟಿಂಗ್‌ಗೂ ಮುನ್ನವೇ ನಿರ್ಮಾಪಕರಿಗೆ ಶಾಕ್

ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ನಿರ್ಮಾಣದ ‘ಡಾನ್ 3’ ಸಿನಿಮಾದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ಚಿತ್ರೀಕರಣ ಆರಂಭದ ಹಂತದಲ್ಲೇ ರಣವೀರ್ ಸಿಂಗ್ ಸಿನಿಮಾ ತೊರೆದಿದ್ದಾರೆ ಎನ್ನಲಾಗಿದೆ. ಇದರಿಂದ ನಿರ್ಮಾಣ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂಬ ಮಾತು ಕೇಳಿಬರುತ್ತಿದೆ.

FWICEನಿಂದ ಅಸಹಕಾರ ಘೋಷಣೆ

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ FWICE, ನಿರ್ಮಾಪಕರಿಗೆ ಉಂಟಾದ ಸಮಸ್ಯೆಯನ್ನು ಉಲ್ಲೇಖಿಸಿ ರಣವೀರ್ ವಿರುದ್ಧ ಕಠಿಣ ನಿಲುವು ಕೈಗೊಂಡಿದೆ. ಚಿತ್ರರಂಗದ ಸದಸ್ಯರು ಅವರೊಂದಿಗೆ ಕೆಲಸ ಮಾಡುವ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಒಕ್ಕೂಟ ಸೂಚನೆ ನೀಡಿದೆ.

ಇದನ್ನೂ ಓದಿ:

ರಾಜಿ ಮಾತುಕತೆ ವಿಫಲ

ಈ ವಿವಾದ ಬಗೆಹರಿಸಲು ನಿರ್ಮಾಪಕರ ಸಂಘದ ಮಟ್ಟದಲ್ಲೂ ಸಭೆಗಳು ನಡೆದಿದ್ದವು. ಆದರೆ ನಷ್ಟ ಪರಿಹಾರ ಮತ್ತು ಒಪ್ಪಂದದ ವಿಷಯದಲ್ಲಿ ಸಮಾಧಾನಕರ ಪರಿಹಾರ ಸಿಗದ ಕಾರಣ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ರಣವೀರ್ ಭವಿಷ್ಯದ ಸಿನಿಮಾಗಳಿಗೆ ಪರಿಣಾಮ?

‘ಧುರಂಧರ್’ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಬೇಡಿಕೆ ಹೆಚ್ಚಿದ್ದರೂ, ಈ ಹೊಸ ವಿವಾದ ಅವರ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೀಗ ನಟನ ಪ್ರತಿಕ್ರಿಯೆ ಮತ್ತು ‘ಡಾನ್ 3’ ಚಿತ್ರದ ಮುಂದಿನ ಹೆಜ್ಜೆ ಬಗ್ಗೆ ಬಾಲಿವುಡ್‌ನಲ್ಲಿ ಕುತೂಹಲ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !