July 15, 2026
Wednesday, July 15, 2026
spot_img

5 ರೂಗೆ ಫಿಶ್ ಮೀಲ್! ಬಂಗಾಳದಲ್ಲಿ ಭಾರೀ ಸದ್ದು ಮಾಡುತ್ತಿದೆ ‘ಮೀನು ರಾಜಕೀಯ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿರುವ ಬಿಜೆಪಿ ಸರ್ಕಾರ ಜನರ ಗಮನ ಸೆಳೆಯುವ ಮಹತ್ವದ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಕೇವಲ ₹5 ರುಪಾಯಿಗೆ ಮೀನು-ಅನ್ನ ಊಟ ನೀಡುವ ಹೊಸ ಯೋಜನೆ ಘೋಷಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

₹5ಕ್ಕೆ ಮೀನು-ಅನ್ನ ಊಟ

ರಾಜ್ಯದ ಸುಮಾರು 400 ವಿಶೇಷ ಕ್ಯಾಂಟೀನ್‌ಗಳಲ್ಲಿ ವಾರಕ್ಕೆ ಎರಡು ದಿನ ಕಡಿಮೆ ದರದಲ್ಲಿ ಫಿಶ್ ಮೀಲ್ ನೀಡಲು ಸರ್ಕಾರ ಯೋಜಿಸಿದೆ. ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಪೌಷ್ಟಿಕ ಆಹಾರ ಒದಗಿಸುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ.

ಮಹಿಳೆಯರಿಗೆ ₹3,000 ಯೋಜನೆ

ಚುನಾವಣಾ ಭರವಸೆಯ ಭಾಗವಾಗಿ “ಅನ್ನಪೂರ್ಣ ಯೋಜನೆ” ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹3,000 ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಅರ್ಜಿ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಮದ್ಯದಂಗಡಿಗಳಿಗೆ ಹೊಸ ನಿಯಮ

ಶಾಲೆ, ಕಾಲೇಜು ಹಾಗೂ ಧಾರ್ಮಿಕ ಸ್ಥಳಗಳ ಸುತ್ತ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳಿಗೆ ಅನುಮತಿ ನೀಡದಂತೆ ಸರ್ಕಾರ ತೀರ್ಮಾನಿಸಿದೆ.

‘ಕಾನೂನಿನ ಆಡಳಿತ’ ಘೋಷಣೆ

ಹೊಸ ಸರ್ಕಾರ “ಆಡಳಿತಗಾರರ ಆಡಳಿತವಲ್ಲ, ಕಾನೂನಿನ ಆಡಳಿತ” ಎಂಬ ಸಂದೇಶದೊಂದಿಗೆ ಕೆಲಸ ಮಾಡಲಿದೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಹೊಸ ಯೋಜನೆಗಳು ಈಗ ಬಂಗಾಳ ರಾಜಕೀಯಕ್ಕೆ ಹೊಸ ಟ್ವಿಸ್ಟ್ ನೀಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !