ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತಿದ್ದು, ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ಈ ಹವಾಮಾನಕ್ಕೆ ತಕ್ಕಂತೆ ಬದಲಾಗಿ, ದೇಹದಲ್ಲಿ ಸದಾ ನೀರು ಇರುವಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.ತೀವ್ರ ಬಿಸಿಲಿನ ಪರಿಣಾಮದಿಂದ ಮಕ್ಕಳು ಮತ್ತು ಹಿರಿಯರು ಹಾಗೂ ಹೊರಗೆ ಕೆಲಸ ಮಾಡುವವರು ಅದರಲ್ಲೂ ವಿಶೇಷವಾಗಿ ದೈಹಿಕವಾಗಿ ದುರ್ಬಲ ಜನರು ಶಾಖದ ಅಲೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಶಾಖದ ಬಳಲಿಕೆಯ ಎಚ್ಚರಿಕೆಯ ಚಿಹ್ನೆಗಳನ್ನು ಯಾರೂ ನಿರ್ಲಕ್ಷಿಸಬಾರದು. ಇದು ಅಪಾಯಕಾರಿ ಮತ್ತು ಶಾಖದ ಹೊಡೆತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ವಾಕರಿಕೆ, ಸುಸ್ತು, ಬಾಯಿ ಒಣಗುವುದು, ತಲೆನೋವು ಕಾಣಿಸಿದರೆ ಅದು ನಿರ್ಜಲೀಕರಣದ ಲಕ್ಷಣವಾಗಿದೆ. ನಿಮ್ಮ ಸುತ್ತಮುತ್ತ ಇಂಥವರು ಕಂಡುಬಂದರೆ ಸಹಾಯ ಮಾಡಿ. ಪ್ರಾಣಿ, ಪಕ್ಷಿಗಳಿಗಾಗಿ ನೀರನ್ನು ಇಡಿ ಎಂದು ಮನವಿ ಮಾಡಿದ್ದಾರೆ.



