May 28, 2026
Thursday, May 28, 2026
spot_img

ದಿನಭವಿಷ್ಯ: ಜಗದ ಜಂಜಡಕ್ಕೆ ಮನಸು ಹಾಳು ಮಾಡಿಕೊಳ್ಳಬೇಡಿ, ಮೌನವಾಗಿ ನಿಮ್ಮ ಕಾರ್ಯ ನಿರ್ವಹಿಸಿ

ಮೇಷ
ಕಠಿಣ ದಿನ. ಆದರೂ ಮೌನವಾಗಿ ನಿಮ್ಮ ಕಾರ್ಯ ನಿರ್ವಹಿಸಿ. ಸಾಫಲ್ಯ ಸಿಗಲಿದೆ. ಆರ್ಥಿಕ ಬಿಕ್ಕಟ್ಟು ನಿವಾರಣೆ. ಕೌಟುಂಬಿಕ ಸಹಕಾರ.
ವೃಷಭ
ಭರವಸೆಯ ದಿನ. ಶುಭ ಸಂಕೇತಗಳು ಕಾಣುತ್ತಿವೆ. ವೈಯಕ್ತಿಕ ಸಮಸ್ಯೆ ಪರಿಹಾರದ ದಾರಿ ತೋರಲಿದೆ. ಚಿಂತಿತ ಮನಸ್ಸಿಗೆ ಶಮನ.
ಮಿಥುನ
ಎಲ್ಲರ ಜತೆ ಕೂಡಿ ಕಳೆಯುವ ಅವಕಾಶ. ಪುಟ್ಟ ಪ್ರವಾಸಕ್ಕೆ ಸಿದ್ಧರಾಗಿ. ದೈನಂದಿನ ರಗಳೆ ಮರೆತು ವ್ಯವಹರಿಸಿ. ಬಂಧು ಜತೆಗಿನ ವಿರಸ ಮಾಯ.
ಕಟಕ
ಹರ್ಷೋಲ್ಲಾಸ. ಕೌಟುಂಬಿಕ ಸಮಾಗಮ. ಹಣದ ಬಿಕ್ಕಟ್ಟು ಪರಿಹಾರ. ಖರ್ಚು ತುಸು ಹೆಚ್ಚಿದರೂ ಅದು ಕೌಟುಂಬಿಕ ಹರ್ಷ ಹೆಚ್ಚಿಸಲಿದೆ.
ಸಿಂಹ
ನಿಮ್ಮ ವ್ಯವಹಾರದಲ್ಲಿ ಒಳ್ಳೆ ಅವಕಾಶ ಸಿಕ್ಕರೆ ತಿರಸ್ಕರಿಸಬೇಡಿ. ಹಿಂಜರಿಕೆ ತ್ಯಜಿಸಿ. ಆತ್ಮೀಯರ ಸಂಗದಲ್ಲಿ ಸಂತೋಷ ಕಾಣುವಿರಿ. ಧನಪ್ರಾಪ್ತಿ.
ಕನ್ಯಾ
ನಿಮ್ಮ ಹಠಮಾರಿ ವರ್ತನೆ ಇತರರ ಟೀಕೆಗೆ ಗುರಿಯಾದೀತು. ವಿನಯ ಪ್ರದರ್ಶಿಸಿ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ಹೊಂದಾಣಿಕೆ ಒಳಿತು.
ತುಲಾ
ವ್ಯವಹಾರದಲ್ಲಿ ಮುತುವರ್ಜಿ ವಹಿಸಿ. ನಿರ್ಲಕ್ಷ್ಯಕ್ಕೆ ಬೆಲೆ ತೆರಬೇಕಾದೀತು. ಖಾಸಗಿ ಬದುಕಿಗೆ ಹೆಚ್ಚಿನ ಗಮನ ಕೊಡಬೇಕಾದ ಪ್ರಸಂಗ.
ವೃಶ್ಚಿಕ
ನಿಮ್ಮ ಕುರಿತಂತೆಯೆ ಸಿನಿಕತನ ಬೇಡ. ಎಲ್ಲವನ್ನು ಆಶಾವಾದದಿಂದ ಸ್ವೀಕರಿಸಿ. ಜಗದ ಜಂಜಡಕ್ಕೆ ಮನಸು ಹಾಳು ಮಾಡಿಕೊಳ್ಳದಿರಿ. ಒಳ್ಳೆ ಕಾಲ ಬರಲಿದೆ.
ಧನು
ಶಾಂತ ಮನಸ್ಸು. ದುಗುಡ ನಿವಾರಣೆ. ಇತರರ ಮೇಲ್ಪಂಕ್ತಿ ಅನುಸರಿಸಿ. ಮುಖ್ಯ ಬೇಡಿಕೆಯೊಂದು ಇಂದು ಈಡೇರುವುದು.
ಮಕರ
ಎಲ್ಲರ ನಡುವೆ ನಿಮ್ಮ ಕೆಲಸವೇನು ಎಂದು ಪರಾಮರ್ಶಿಸಿ. ಅದರಂತೆ ವರ್ತಿಸಿ. ಎಲ್ಲರಿಂದ ಬೇರೆಯಾಗಿ ನಿಲ್ಲಬೇಡಿ. ಹೊಂದಾಣಿಕೆ ಮುಖ್ಯ.
ಕುಂಭ
ಆರ್ಥಿಕ ಉನ್ನತಿ. ಆಕಾಂಕ್ಷೆ ಈಡೇರಿಕೆ. ಆಪ್ತರ ಜತೆ ಭಾವುಕ ಸನ್ನಿವೇಶ ಎದುರಿಸುವಿರಿ. ಮನೋದಾರ್ಢ್ಯ ಪ್ರದರ್ಶಿಸಿ.
ಮೀನ
ಒತ್ತಡಗಳಿಲ್ಲದ ವಿರಾಮ ದಿನ. ಬಂಧು ಬಳಗದ ಭೇಟಿ. ಮನೆಯಲ್ಲಿ ಹರ್ಷದ ವಾತಾವರಣ. ಖರೀದಿ ಹುಮ್ಮಸ್ಸು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !