July 17, 2026
Friday, July 17, 2026
spot_img

ಬ್ರೇಕ್‌ಫಾಸ್ಟ್ ಟೇಬಲ್‌ನಲ್ಲಿ ವಿದಾಯದ ಚರ್ಚೆ: ಕಾಂಗ್ರೆಸ್‌ನಲ್ಲಿ ಅಧಿಕಾರ ಬದಲಾವಣೆಗೆ ವೇದಿಕೆ ಸಿದ್ಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್‌ನ ಒಳರಾಜಕೀಯ ಚರ್ಚೆಗಳು ನಿರ್ಣಾಯಕ ಹಂತ ತಲುಪಿದ್ದು, ರಾಜ್ಯದ ನಾಯಕತ್ವದಲ್ಲಿ ಬದಲಾವಣೆ ಖಚಿತವಾಗುವಂತೆ ಪರಿಸ್ಥಿತಿ ರೂಪುಗೊಂಡಿದೆ.

ಕಾವೇರಿ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್: ಸಚಿವರ ತುರ್ತು ಸಭೆ

ಸಿಎಂ ಕಾವೇರಿ ನಿವಾಸದಲ್ಲಿ ಇಂದು ಬೆಳಗ್ಗೆ ಬ್ರೇಕ್‌ಫಾಸ್ಟ್ ಸಭೆ ನಡೆಯುತ್ತಿದೆ. ಎಲ್ಲಾ ಸಚಿವರಿಗೆ ಆಹ್ವಾನ ನೀಡಲಾಗಿದ್ದು, ಸುರ್ಜೇವಾಲ, ಡಿಸಿಎಂ ಡಿಕೆ ಶಿವಕುಮಾರ್ ಸಹ ಭಾಗಿಯಾಗುತ್ತಿದ್ದಾರೆ. ಇದೇ ಸಭೆಯಲ್ಲಿ ಸಿದ್ದರಾಮಯ್ಯ ತಮ್ಮ ರಾಜೀನಾಮೆ ನಿರ್ಧಾರವನ್ನು ಘೋಷಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:

ವಿದಾಯ ಸಂದೇಶ ಮತ್ತು ಪತ್ರಿಕಾಗೋಷ್ಠಿ ಸಾಧ್ಯತೆ

ಸಭೆಯ ನಂತರ ಸಿಎಂ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ. ತಮ್ಮ ರಾಜೀನಾಮೆಯ ಕಾರಣ ಹಾಗೂ ರಾಜಕೀಯ ನಿರ್ಧಾರಗಳ ಬಗ್ಗೆ ರಾಜ್ಯದ ಜನತೆಗೆ ವಿವರ ನೀಡುವ ನಿರೀಕ್ಷೆಯಿದೆ. ಆಪ್ತ ಸಚಿವರು ಮನವೊಲಿಸಲು ಯತ್ನಿಸಿದರೂ ಸಿದ್ದರಾಮಯ್ಯ ತಮ್ಮ ನಿಲುವಿನಲ್ಲಿ ಸ್ಥಿರರಾಗಿದ್ದಾರೆ ಎನ್ನಲಾಗಿದೆ.

ಹೊಸ ನಾಯಕತ್ವದತ್ತ ಕಾಂಗ್ರೆಸ್: ಡಿಕೆಶಿ ಹೆಸರು ಮುಂಚೂಣಿಯಲ್ಲಿ

ರಾಜೀನಾಮೆ ಬಳಿಕ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುವ ಸಾಧ್ಯತೆ ಇದೆ. ಹೊಸ ನಾಯಕನ ಆಯ್ಕೆ ಕುರಿತು ಚರ್ಚೆ ನಡೆಯಲಿದ್ದು, ಡಿಕೆ ಶಿವಕುಮಾರ್ ಹೆಸರು ಮುಂಚೂಣಿಯಲ್ಲಿ ಇದೆ ಎಂದು ತಿಳಿದುಬಂದಿದೆ. ಹೈಕಮಾಂಡ್ ನಿರ್ಧಾರಕ್ಕೆ ಪಕ್ಷ ಬದ್ಧವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !