October 16, 2026
Friday, October 16, 2026
spot_img

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಶಾಕ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಸಂಭ್ರಮ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದ್ದು, ಪ್ರಮುಖ ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿದೆ.

ಮೂರು ಪಾಲಿಕೆಯಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್

ರಾಜ್ಯದ ಧರ್ಮಶಾಲಾ, ಸೋಲನ್ ಮತ್ತು ಮಂಡಿ ಪಾಲಿಕೆಗಳಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪಲಂಪುರ್ ಪಾಲಿಕೆಯನ್ನು ಕಾಂಗ್ರೆಸ್ ಗೆದ್ದಿದೆ. ಮಂಡಿ ಪಾಲಿಕೆಯ 15 ವಾರ್ಡ್​ಗಳಲ್ಲಿ ಬಿಜೆಪಿ 12ರಲ್ಲಿ ಗೆದ್ದರೆ, ಕಾಂಗ್ರೆಸ್​ಗೆ ಒಂದು ಮಾತ್ರ. ಸೋಲನ್​ನಲ್ಲಿ 17 ವಾರ್ಡ್​ಗಳಲ್ಲಿ ಬಿಜೆಪಿ 10 ರಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್​ಗೆ 6 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಧರ್ಮಶಾಲಾದ 17 ವಾರ್ಡ್​ಗಳಲ್ಲಿ ಬಿಜೆಪಿ 11 ಸ್ಥಾನದಲ್ಲಿ ಗೆಲುವಿನ ನಗೆ ಬೀರಿದೆ, ಕಾಂಗ್ರೆಸ್​ಗೆ 5 ಸ್ಥಾನ ಸಿಕ್ಕಿದೆ. ಇನ್ನು ಪಲಂಪುರ್​ನಲ್ಲಿ ಕಾಂಗ್ರೆಸ್​ಗೆ 11 ಸ್ಥಾನ ಗೆದ್ದು ಅಧಿಕಾರಕ್ಕೆ ಏರಿದ್ದು, ಬಿಜೆಪಿಗೆ 4 ಸ್ಥಾನ ಗೆದ್ದಿದೆ.

ನಗರ ಚುನಾವಣೆಯಲ್ಲೂ ಬಿಜೆಪಿ ಮ್ಯಾಜಿಕ್

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಜಯ ಸಾಧಿಸಿದ್ದು, 25 ನಗರಸಭೆಯಲ್ಲಿ 18ರಲ್ಲಿ ಬಿಜೆಪಿ ಗೆದ್ದಿದೆ. 22 ನಗರ ಪಂಚಾಯಿತಿಗಳಲ್ಲಿ 12ರಲ್ಲಿ ಬಿಜೆಪಿ ಗೆದ್ದಿದೆ.

ಇದು ಕಾಂಗ್ರೆಸ್ ಸರ್ಕಾರದ ವೈಫಲ್ಯ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಈ ಗೆಲುವು ಕನ್ನಡಿಯಾಗಿದೆ. ಈ ಮೂಲಕ ಮತದಾರರು ಕಾಂಗ್ರೆಸ್ ಸರಕಾರವನ್ನು ತಿರಸ್ಕರಿಸಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಜೈರಾಮ್ ಠಾಕೂರ್ ಹೇಳಿದರು.

Must Read