May 31, 2026
Sunday, May 31, 2026
spot_img

IPL | ಅವತ್ತೇ ಹೇಳಿಲ್ವಾ ಗುರೂ…..’ಈ ಸಲನೂ ಕಪ್ ನಮ್ದೇ’ ಅಂತ… 2ನೇ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ RCB

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ತನ್ನ ಚಾಂಪಿಯನ್ ಪ್ರಭಾವ ಮುಂದುವರಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಸಮರದಲ್ಲಿ ಗುಜರಾತ್ ಟೈಟಾನ್ಸ್‌ ತಂಡವನ್ನು ಮಣಿಸಿದ ಆರ್‌ಸಿಬಿ, ಸತತ ಎರಡನೇ ಬಾರಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ.

ಬೌಲರ್‌ಗಳ ಬಿಗಿ ಹಿಡಿತ

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಬೇಗನೇ ನಿರ್ಗಮಿಸಿದ ಪರಿಣಾಮ ತಂಡ ದೊಡ್ಡ ಮೊತ್ತ ಕಟ್ಟಲು ವಿಫಲವಾಯಿತು. ವಾಷಿಂಗ್ಟನ್ ಸುಂದರ್ ಅರ್ಧಶತಕದ ನೆರವಿನಿಂದ ತಂಡ 20 ಓವರ್‌ಗಳಲ್ಲಿ 155 ರನ್ ಕಲೆಹಾಕಿತು.

ಕೊಹ್ಲಿಯ ಜವಾಬ್ದಾರಿಯುತ ಆಟ

156 ರನ್ ಗುರಿ ಬೆನ್ನತ್ತಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಸರೆಯಾದರು. ಆರಂಭದಿಂದಲೇ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದ ಅವರು ಅಜೇಯ ಅರ್ಧಶತಕದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ವೆಂಕಟೇಶ್ ಅಯ್ಯರ್ ಕೂಡ ವೇಗದ ಇನ್ನಿಂಗ್ಸ್ ಆಡಿದರು.

ಇದನ್ನೂ ಓದಿ:

ಮತ್ತೆ ಬೆಂಗಳೂರಿನ ಸಂಭ್ರಮ

ಕೆಲವು ವಿಕೆಟ್‌ಗಳನ್ನು ಕಳೆದುಕೊಂಡರೂ ಆರ್‌ಸಿಬಿ ಗುರಿ ತಲುಪುವಲ್ಲಿ ಯಾವುದೇ ಅಡ್ಡಿ ಎದುರಿಸಲಿಲ್ಲ. ಅಂತಿಮವಾಗಿ ಎರಡು ಓವರ್‌ಗಳ ಮುನ್ನವೇ ಗೆಲುವು ಸಾಧಿಸಿದ ಬೆಂಗಳೂರು ತಂಡ, ಮತ್ತೊಮ್ಮೆ ಕಪ್ ತನ್ನದಾಗಿಸಿಕೊಂಡಿತು.

ದಾಖಲೆಗಳ ಪಟ್ಟಿಗೆ ಸೇರ್ಪಡೆ

ಈ ಜಯದೊಂದಿಗೆ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಬಾರಿ ಚಾಂಪಿಯನ್ ಆದ ಕೆಲವೇ ತಂಡಗಳ ಪಟ್ಟಿಗೆ ಆರ್‌ಸಿಬಿ ಸೇರ್ಪಡೆಯಾಗಿದೆ. ವಿಶ್ವದಾದ್ಯಂತ ಇರುವ ಅಭಿಮಾನಿಗಳು ತಂಡದ ಈ ಸಾಧನೆಯನ್ನು ಸಂಭ್ರಮಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !