October 16, 2026
Friday, October 16, 2026
spot_img

ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ, ಎಂಟು ಅಗ್ನಿಶಾಮಕ ವಾಹನಗಳ ಆಗಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ವಿಕಾಸ್‌ ಮಾರ್ಗದಲ್ಲಿರುವ ಸಚಿವಾಲಯದ ಎರಡನೇ ಮಹಡಿಯಲ್ಲಿ ಬೆಂಕಿ ಹೊತ್ತಿದೆ.

ಕಟ್ಟಡದಿಂದ ಹೊಗೆ ಕಾಣಿಸುತ್ತಿದ್ದಂತೆಯೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಸದ್ಯ ಎಂಟಕ್ಕೂ ಅಧಿಕ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುತ್ತಿವೆ.

ಈ ಬೆಂಕಿ ಹೇಗೆ ಆರಂಭವಾಯಿತು, ಇದು ಆಕಸ್ಮಿಕವೋ ಅಥವಾ ಬೇಕಂತಲೇ ಮಾಡಿದ್ದಾ? ಈ ಅಗ್ನಿ ಅವಘಡದಿಂದ ಏನೆಲ್ಲಾ ಹಾನಿಯಾಗಿದೆ? ಯಾವೆಲ್ಲ ಡಾಕ್ಯುಮೆಂಟ್ಸ್‌ ಉರಿದು ಹೋಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

https://hosadigantha.com/wp-admin/post.php?post=72030&action=edit

Must Read