September 10, 2026
Thursday, September 10, 2026
spot_img

ಗುಜರಾತ್‌ನವರು ಇನ್‌ಫ್ಲೂಯೆನ್ಸ್‌ ಮಾಡಿ ಫೈನಲ್‌ ಮ್ಯಾಚ್‌ ನಮ್ಮಿಂದ ಕಿತ್ಕೊಂಡಿದ್ದಾರೆ: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಗುಜರಾತ್‌ನವರು ಇನ್‌ಫ್ಲೂಯೆನ್ಸ್‌ನಿಂದ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಐಪಿಎಲ್ ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಬೇಕಿತ್ತು. ಅದಕ್ಕೆ ನಾವು ಅನುಮತಿ ಕೂಡ ನೀಡಿದ್ದೆವು. ಆದರೆ ಗುಜರಾತ್‌ನವರು ತಮ್ಮ ಪ್ರಭಾವ ಬಳಸಿ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ.‌ ತವರಿನಲ್ಲಿ ಆರ್‌ಸಿಬಿ ಮ್ಯಾಚ್‌ ಗೆದ್ದಿದ್ದರೆ ಜನರ ಉತ್ಸಾಹ ಡಬಲ್‌ ಆಗಿರೋದು. ಪ್ಲೇಯರ್ಸ್‌ಗೂ ಆರ್‌ಸಿಬಿಯ ಫ್ಯಾನ್ಸ್‌ ಪ್ರೀತಿ ದುಪ್ಪಟ್ಟಾಗೋದು. ಮುಂದೆ ಇಂತಹ ಪರಿಸ್ಥಿತಿ ಬರದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸ್ಟೇಡಿಯಂಗೆ ಅನ್ಯಾಯವಾಗಿದೆ. ನಮ್ಮ ಯುವಕರಿಗೂ ಅನ್ಯಾಯವಾಗಿದೆ ಎಂದಿದ್ದಾರೆ.

ಐಪಿಎಲ್ ನಿಯಮದ ಪ್ರಕಾರ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡದ ತವರು ಮೈದಾನದಲ್ಲಿ ಮೊದಲ ಪ್ಲೇಆಫ್ ಹಾಗೂ ಫೈನಲ್ ಪಂದ್ಯ ಆಯೋಜಿಸುವ ಅವಕಾಶ ಇರುತ್ತದೆ. ಆದರೆ ಈ ಬಾರಿ ಬೆಂಗಳೂರಿಲ್ಲಿ ಫೈನಲ್ ಪಂದ್ಯ ನಡೆಯಲಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಲವು ತಾಂತ್ರಿಕ ವೈಫಲ್ಯಗಳು ಹಾಗೂ ಶಾಸಕರಿಗೆ 10 ಸಾವಿರ ಟಿಕೆಟ್‌ಗಳನ್ನು ನೀಡುವಂತೆ ರಾಜ್ಯ ಸರ್ಕಾರ ಬಿಸಿಸಿಐಗೆ ಮನವಿ ಮಾಡಿದ್ದರಿಂದ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್ ಮಾಡಲಾಗಿದೆ ಎಂಬ ಉತ್ತರ ಬಿಸಿಸಿಐ ಕಡೆಯಿಂದ ಬಂದಿತ್ತು.

ಈ ಎಲ್ಲ ಕಾರಣಗಳಿಂದ ಆರ್‌ಸಿಬಿ ಮ್ಯಾಚ್‌ ತವರಿನಲ್ಲಿ ನಡೆದಿಲ್ಲ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !