ಹೊಸದಿಗಂತ ವರದಿ ವಿಜಯಪುರ :
ವಿಜಯಪುರ ಜಿಲ್ಲೆಯಲ್ಲಿ ಆತಂಕ ಮೂಡಿಸಿದ ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ 6 ಜನರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಮಾಸಿದ್ದ ಶ್ರೀಮಂತ ಬಿರಾದಾರ (44), ಮಹೇಶ ಲಕ್ಷ್ಮಣ ಬಿರಾದಾರ (22), ರಾಜಕುಮಾರ ಸಿದ್ದರಾಮ ಕೋಳಿ (28), ರಾಜು ಚಂದ್ರಕಾಂತ ಉಗಾರ (20), ಯಲ್ಲಪ್ಪ ಮಹಾದೇವ ಅರಕೇರಿ (25), ಕಲ್ಲನಗೌಡ ಈಶ್ವರಗೌಡ ಪಾಟೀಲ (65), ಲಾಯಪ್ಪ ನೇನಪ್ಪ ಬಿರಾದಾರ (65), ಸುಭಾಷ ಮಾಸಿದ್ದ ಬಿರಾದಾರ (21), ರೇವಸಾಬ ಅವಧೂತ ಬಿರಾದಾರ (20), ಗಜಾನಂದ ಭೂತಾಳೆ ಬಿರಾದಾರ (20), ಮಲಕಾರಿ ಹನುಮಂತ ಕೋಳಿ (18), ಸಂಜು ಮಹಾದೇವ ಅರಕೇರಿ (31) ಬಂಧಿತ ಆರೋಪಿಗಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.



