October 9, 2026
Friday, October 9, 2026
spot_img

ವಾಹನ ಸವಾರರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ: ಓರ್ವನ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಅಂಕೋಲಾ:

ಅಂಕೋಲಾ ತಾಲೂಕಿನಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ಕುರಿತಂತೆ ಪೊಲೀಸರಿಗೆ ಖಚಿತ ಮಾಹಿತಿ ದೊರಕಿದ್ದು ವ್ಯಕ್ತಿಯೋರ್ವನ ಮೇಲೆ ಪಿ.ಎಸ್.ಐ ವಿಶ್ವನಾಥ ನಿಂಗೊಳ್ಳಿ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದಾರೆ.

ತಾಲೂಕಿನ ಬಾಳೆಗುಳಿಯ ಪ್ಲೈ ಓವರ್ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ನೀಲಿ ಬಣ್ಣದ ಪ್ಯಾಂಟ್ ಕಪ್ಪು ಬಿಳಿ ಬಣ್ಣದ ಟಿ ಶರ್ಟ್ ಧರಿಸಿರುವ ವ್ಯಕ್ತಿ ತನ್ನ ಸುತ್ತ ಕಪ್ಪು,ನೀಲಿ ಮತ್ತು ಕೆಂಪು ಬಣ್ಣದ ಬ್ಯಾಗುಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಹೋಗುವ ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ದೊರಕಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿತ್ತು.

ಈ ಮಾಹಿತಿ ಖಚಿತವೆಂದು ತಿಳಿದು ಬಂದಿದ್ದರಿಂದ ವ್ಯಕ್ತಿಯ ಮೇಲೆ ಕ್ರಮಕ್ಕೆ ಮಾದಕದ್ರವ್ಯಗಳ ಮಾರಾಟ ನಿಷೇಧ ಕಾಯ್ದೆಯ ಕಲಂ 20 ಬಿ ಅಡಿಯಲ್ಲಿ ದೂರು ದಾಖಲಿಸಿ ನ್ಯಾಯಾಲಯಕ್ಕೆ ವರ್ತಮಾನ ವರದಿ ಸಲ್ಲಿಸಿರುವ ಪೊಲೀಸರು ವ್ಯಕ್ತಿಯ ಕುರಿತಂತೆ ತನಿಖೆ ಮುಂದುವರಿಸಿದ್ದಾರೆ.

Must Read