June 2, 2026
Tuesday, June 2, 2026
spot_img

ದಿನಭವಿಷ್ಯ: ದುಡುಕಿ ಯಾವುದೇ ಕೆಲಸ ಮಾಡ್ಬೇಡಿ, ಹೊಂದಿಕೊಂಡು ಹೋಗೋದು ಕಲಿಯಿರಿ

ಮೇಷ.
ಪರಿಸ್ಥಿತಿ ಪ್ರತಿಕೂಲ ಆಗಿದ್ದರೆ ಸ್ವಲ್ಪ ಕಾಲ ಕಾದು ನೋಡಿ. ಬಳಿಕ ಸರಿ ಹೋಗುವುದು. ದುಡುಕಿನ ಕ್ರಮ ಕೈಗೊಳ್ಳಬೇಡಿ. ಸೂಕ್ತ ಸಹಕಾರ ಪಡೆಯಿರಿ.
ವೃಷಭ
ಕೆಲವರನ್ನು ಬದಲಿಸಲು ನಿಮ್ಮಿಂದ ಅಸಾಧ್ಯ. ಅವರ ಜತೆ ಹೊಂದಿಕೊಂಡು ಹೋಗುವುದೇ ಒಳಿತು. ವ್ಯವಹಾರದಲ್ಲಿ ಯಶ.
ಮಿಥುನ
ವೃತ್ತಿಯಲ್ಲಿ ಸಮಸ್ಯೆ ನೀಗಿಸಲು ಶಕ್ತರಾಗುವಿರಿ. ವಿರೋಧಿಗಳ ಬಾಯಿ ಮುಚ್ಚಿಸುವಿರಿ. ಆರೋಗ್ಯ ಕಾಳಜಿ ನೋಡಿಕೊಳ್ಳಿ. ಸಿಕ್ಕಿದ್ದನ್ನು ತಿನ್ನಬೇಡಿ.
ಕಟಕ
ಸದಾ ಮುಂದೆ ಹೆಜ್ಜೆ ಇಡಿ. ಸಣ್ಣ ಅಪಯಶಸ್ಸು ಕಂಡು ಹಿಂದಡಿ ಇಡಬೇಡಿ. ವ್ಯವಹಾರದಲ್ಲಿ ಕೆಲವರ ಅಸಹಕಾರ. ಕಠಿಣ ನಿಲುವು ಪ್ರದರ್ಶಿಸಿ.
ಸಿಂಹ
ಹೆತ್ತವರು ಮಕ್ಕಳ ಕುರಿತು ಕಾಳಜಿ ವಹಿಸಿ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ನೆಂಟರಿಂದ ಟೀಕೆ ಕೇಳುವಿರಿ. ಧನಹಾನಿ.
ಕನ್ಯಾ
ಆರ್ಥಿಕ ಒತ್ತಡ. ಅನ್ಯರ ನೆರವು ಅಪೇಕ್ಷಿಸಿದರೂ ಸಿಗದು. ಸಣ್ಣ ಘಟನೆಯೊಂದು ಮಾನಸಿಕ ಕ್ಷೋಭೆ ಉಂಟು ಮಾಡಬಹುದು.
ತುಲಾ
ಅಡ್ಡಿಗಳಿಗೆ ಅಂಜಬೇಡಿ. ಅದನ್ನು ದಾಟಿ ಮುಂದೆ ಸಾಗಲು ಯತ್ನಿಸಿ. ಮನೆಯಲ್ಲಿ ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು.
ವೃಶ್ಚಿಕ
ವೃತ್ತಿಯಲ್ಲಿ ಕಠಿಣ ಸ್ಪರ್ಧೆ. ನಿಮ್ಮ ಪ್ರಭುತ್ವ ಸ್ಥಾಪಿಸಲು ಸಮಯ ಬೇಕಾದೀತು. ಮನೆಯಲ್ಲಿ ಶಾಂತ ಪರಿಸ್ಥಿತಿ. ಹಣದ ಬಿಕ್ಕಟ್ಟು ಪರಿಹಾರ.
ಧನು
ಮಾನಸಿಕ ಶಾಂತಿ ಕದಡುವ ಬೆಳವಣಿಗೆ. ಸಮಚಿತ್ತ ಕಾಯ್ದುಕೊಳ್ಳಿ. ಕೆಲವರ ಕೆಣಕುವಿಕೆ ನಿರ್ಲಕ್ಷಿಸಿ. ಬಂಧುವಿನ ಕಿರಿಕಿರಿ ಎದುರಿಸುವಿರಿ.
ಮಕರ
ಕಠಿಣ ಶ್ರಮಕ್ಕೆ ಫಲ ಸಿಗುವುದು. ಪ್ರಮುಖ ಕೆಲಸ ನಾಳೆಗೆ ಮುಂದೂಡುವ ಅಭ್ಯಾಸ ಬಿಡಿ. ಬಂಧುಗಳಿಂದ ಅಸಹಕಾರ.
ಕುಂಭ
ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸಿಗಲಿದೆ. ಟೀಕೆಗಳಿಗೆ ಅಂಜಿ ಉದ್ದೇಶಿತ ಕೆಲಸದಿಂದ ಹಿಂದೆ ಸರಿಯಬೇಡಿ. ಬಂಧುವಿನಿಂದ ಒತ್ತಡ.
ಮೀನ
ಹತಾಶೆಯ ಮನೋಭಾವ. ಅದಕ್ಕೆ ಕಾರಣ ಮುಗಿಯದ ಸಮಸ್ಯೆ. ಗ್ರಹಗತಿ ಹಾಗಿದೆ. ಕೆಲ ಕಾಲ ಮಾನಸಿಕ ಕಿರಿಕಿರಿ ಬಾಧಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !