October 5, 2026
Monday, October 5, 2026
spot_img

ದಿನಭವಿಷ್ಯ: ಬೇಸರ ಕಳೆದು ಹೊಸ ಉತ್ಸಾಹ ಮೂಡಲಿದೆ, ವೈವಾಹಿಕ ಶುಭ ಯೋಗ ಕೂಡಿಬರಲಿದೆ

ಮೇಷ.
ಕೆಲ ದಿನಗಳ ಬೇಸರ ಕಳೆದು ಹುರುಪು ತುಂಬುವ ಸನ್ನಿವೇಶ. ಪ್ರೀತಿಪಾತ್ರರ ಸಂಗದಲ್ಲಿ ಉತ್ಸಾಹ. ಹಣದ ಬಿಕ್ಕಟ್ಟು ಪರಿಹಾರ ಕಾಣಲಿದೆ.        
ವೃಷಭ
 ತಕ್ಷಣವೇ ಗಮನ ಹರಿಸಬೇಕಾದ ವಿಚಾರ ಕಡೆಗಣಿಸಬೇಡಿ. ಕ್ಷಿಪ್ರ ನಿರ್ಧಾರ ತಾಳಿ. ನಿಮ್ಮ ನಿರ್ಧಾರ ಒಳ್ಳೆ ಫಲ ನೀಡಲಿದೆ, ಚಿಂತೆ ಬೇಡ.                    
ಮಿಥುನ
ಕೆಲವಾರು ವಿಷಯ ಇಂದು ನಿಮ್ಮ ತಾಳ್ಮೆ ಕೆಣಕುವುದು. ನಿಮ್ಮ ಕ್ರಮ ಯಾವುದೂ ಫಲ ನೀಡದು. ತಾಳ್ಮೆಯಿಂದ ವ್ಯವಹರಿಸಿರಿ.      
ಕಟಕ
   ನಿಮ್ಮ ವರ್ತನೆ  ಬದಲಿಸಬೇಕಾದ ಅನಿವಾರ್ಯತೆ.  ಹೊಂದಾಣಿಕೆಯ ಸ್ವಭಾವ ಬೆಳೆಸಿಕೊಳ್ಳಿ. ಇತರರ ಮಾತಿಗೂ ಬೆಲೆ ಕೊಡಿ.      
ಸಿಂಹ
ಎಲ್ಲ ಕೆಲಸ ಪರಿಪೂರ್ಣವಾಗಿ ಮುಗಿಯಲಿದೆ. ನಿಮ್ಮ ಸಾಧನೆ ನಿಮಗೇ ಅಚ್ಚರಿ ತಂದೀತು. ವೈವಾಹಿಕ ಸಂಬಂಧ ಏರ್ಪಡಲಿದೆ.  
ಕನ್ಯಾ
ಒತ್ತಡ ಮತ್ತು ಅತಿ ಪ್ರಯಾಸದ ದಿನ. ಯಾವ ಕಾರ್ಯವೂ ಸುಲಭದಲ್ಲಿ ಸಾಧ್ಯವಾಗದು. ತೊಡಕು, ವಾದ ಉಂಟಾಗುವುದು. ನೆಗೆಟಿವ್ ಚಿಂತನೆ ಬಿಡಿ.              
ತುಲಾ
ಹಿಗ್ಗು ಕುಗ್ಗು ಎರಡನ್ನೂ ಇಂದು ಅನುಭವಿಸುವಿರಿ. ಆಪ್ತ ರೊಬ್ಬರು ನಿಮ್ಮ ಜತೆ ಮುನಿಸಿಕೊಂಡಾರು. ವ್ಯವಹಾರದಲ್ಲಿ ಪ್ರಗತಿ.        
ವೃಶ್ಚಿಕ
ನಿಮ್ಮ ಚಿಂತೆಯ ಬಗ್ಗೆ ಆಪ್ತರ ಜತೆ ಹಂಚಿಕೊಳ್ಳಿ.  ಹೆಗಲ ಮೇಲಿನ ಹೊರೆ ಕಡಿಮೆಯಾದೀತು. ಭಾವುಕ ಸನ್ನಿವೇಶ ಎದುರಿಸುವಿರಿ.          
ಧನು
 ನಿಮ್ಮ ಕುರಿತಂತೆ ಬಹಳಷ್ಟು ಮಂದಿ ಆಸಕ್ತಿ ತೋರುವರು. ನಿಮ್ಮ ಸಾಧನೆ ಅನ್ಯರ ಗಮನ ಸೆಳೆಯಲಿದೆ. ಆರ್ಥಿಕ ಒತ್ತಡ ಹೆಚ್ಚಳ.        
ಮಕರ
  ಕೆಲವರ ಜತೆ ವ್ಯವಹಾರ ಕಷ್ಟವಾದೀತು. ಆದರೆ ಅದರಿಂದ ಧೃತಿಗೆಡದಿರಿ. ಹಣದ ಕೊರತೆ ನಿವಾರಣೆ. ಆತ್ಮೀಯರಿಂದ ನೆರವು.
ಕುಂಭ
 ಈ ಹಿಂದೆ ಗೊಂದಲ ಸೃಷ್ಟಿಸಿದ್ದ ವಿಷಯಗಳಲ್ಲಿ ಸ್ಪಷ್ಟತೆ ರೂಪಿಸಿಕೊಳ್ಳಿ. ಬದುಕಿನಲ್ಲಿ ಖುಷಿ ಪಡಲು ಸಾಕಷ್ಟು ವಿಷಯಗಳಿವೆ, ಅರಿಯಿರಿ.        
 ಮೀನ
ವೃತ್ತಿ ಒತ್ತಡ ಮರೆತು, ದಿನವಹಿ ಜಂಜಾಟ ಬಿಟ್ಟು ಕಾಲ ಕಳೆಯಿರಿ. ನಿರಾಳ ದಿನವನ್ನು ಗ್ರಹಗತಿ ಸೂಚಿಸುತ್ತಿದೆ. ಆತ್ಮೀಯರ ಒಡನಾಟ ಸಾಧ್ಯತೆ.    

Must Read