June 2, 2026
Tuesday, June 2, 2026
spot_img

ಉತ್ತರ ಪ್ರದೇಶದ ಫಾಜಿಲ್ ನಗರ ಇನ್ಮುಂದೆ ‘ಪಾವಾಗಢ್’: ಸಿಎಂ ಯೋಗಿ ಆದಿತ್ಯನಾಥ್‌ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಫಾಜಿಲ್ ನಗರವನ್ನು ಜೈನ ತೀರ್ಥಂಕ ಭಗವಾನ್ ಮಹಾವೀರರ ಗೌರವಾರ್ಥವಾಗಿ ‘ಪಾವಾಗಢ್’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್‌ ಇಂದು ಘೋಷಿಸಿದ್ದಾರೆ.

ಭಗವಾನ್ ಮಹಾವೀರರ ಹೆಸರು

ಫಾಜಿಲ್ ನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಯೋಗಿ, ಸಚಿವ ಸಂಪುಟದಲ್ಲಿ ಫಾಜಿಲ್ ನಗರವನ್ನು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಅನುಮೋದಿಸಲಾಗಿದೆ. ಇನ್ಮುಂದೆ ಫಾಜಿಲ್ ನಗರ ಎಂದು ಕರೆಯುವ ಬದಲಾಗಿ, ಪಾವಾಗಢ್ ಎಂಬ ಹೆಸರಿನ ಮೂಲಕ ಭಗವಾನ್ ಮಹಾವೀರರ ಹೆಸರಿನಲ್ಲಿ ಗುರುತಿಸಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಪಾವಾಗಢ್ ನಗರವು ಶ್ರೀಮಂತ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ, ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಪವಿತ್ರ ಆಕರ್ಷಿತ ಸ್ಥಳವಾಗಲಿದೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !