June 4, 2026
Thursday, June 4, 2026
spot_img

ದಿನಭವಿಷ್ಯ: ಆತ್ಮೀಯರ ಬೇಸರಕ್ಕೆ ಸಮಾಧಾನ ಹೇಳಿ, ಹೊಸ ವ್ಯವಹಾರದಲ್ಲಿ ತಕ್ಷಣ ಹಣ ಹಾಕ್ಬೇಡಿ

ಮೇಷ
ನಿಮ್ಮ ಪಾಲಿಗೆ ಶುಭದಿನ. ಗುರಿ ಸಾಧನೆ. ವೃತ್ತಿಯಲ್ಲಿ ಉನ್ನತಿಯ ಸಂಕೇತ. ಭಾವನಾತ್ಮಕ ನೋವು ಉಪಶಮನ. ಮನಸ್ಸು ನಿರಾಳ.
ವೃಷಭ
ಉಳಿದವರ ಮುಂದೆ ತಲೆಬಾಗಿ ವರ್ತಿಸಿ. ದುಡುಕು, ಅಹಂ ಪ್ರತಿಕೂಲ ಪರಿಣಾಮ ತಂದೀತು. ಮನೆಯಲ್ಲಿ ಅಸಹಕಾರ.
ಮಿಥುನ
ಮನೆಯವರ ಜತೆ ಮನಸ್ಸು ಬಿಚ್ಚಿ ಮಾತನಾಡಿ. ಮುಚ್ಚುಮರೆ ಮಾಡದಿರಿ. ಕೆಲಸದಲ್ಲಿ ಸಣ್ಣ ತಪ್ಪು ದೊಡ್ಡ ಪರಿಣಾಮ ಉಂಟು ಮಾಡಬಹುದು.
ಕಟಕ
ಸಹೋದ್ಯೋಗಿ ಜತೆ ಸೌಜನ್ಯದ ವರ್ತನೆ ಇರಲಿ. ಸಂಬಂಧ ಕೆಟ್ಟರೆ ಬೇಗ ಸರಿಯಾಗದು. ಆಪ್ತ ವ್ಯಕ್ತಿಯೊಬ್ಬರು ನೋವು ಉಂಟು ಮಾಡಬಹುದು.
ಸಿಂಹ
ಆತ್ಮೀಯರ ಮನಸ್ಸಿನ ನೋವು ಶಮನಕ್ಕೆ ಗಮನ ಕೊಡಿ. ಹಣದ ಒತ್ತಡ. ವೃತ್ತಿ ಕಾರ್ಯದಲ್ಲಿ ಸಣ್ಣಪುಟ್ಟ ವಿಘ್ನಗಳು ಬರಬಹುದು.
ಕನ್ಯಾ
ಗ್ರಹಗತಿ ಅಷ್ಟೇನೂ ಪೂರಕವಾಗಿಲ್ಲ. ಕಾರ್ಯ ವಿಳಂಬ. ಇತರರು ನಿಮ್ಮ ಮನ ನೋಯಿಸುತ್ತಾರೆ. ಆತ್ಮೀಯರ ಜತೆ ಜಗಳ ಸಂಭವ. ತಾಳ್ಮೆ ಅವಶ್ಯ.
ತುಲಾ
ಕುಟುಂಬಸ್ಥರ ಜತೆ ಆತ್ಮೀಯವಾಗಿ ಕಳೆಯಿರಿ. ನಿಮ್ಮದೇ ವೃತ್ತಿ ಕಾರ್ಯದಲ್ಲಿ ಕೌಟುಂಬಿಕ ಹಿತಾಸಕ್ತಿ ಮರೆಯದಿರಿ. ಆರ್ಥಿಕ ಒತ್ತಡ.
ವೃಶ್ಚಿಕ
ವೃತ್ತಿ ಕ್ಷೇತ್ರದಲ್ಲಿ ಜಗಳದಲ್ಲಿ ತೊಡಗದಿರಿ. ಹೆಚ್ಚು ತಾಳ್ಮೆ, ಶಿಸ್ತು ಅವಶ್ಯ. ಮನೆಯವರ ಆರೋಗ್ಯ ಚಿಂತೆಗೆ ಕಾರಣವಾದೀತು. ಆರ್ಥಿಕ ಬಿಕ್ಕಟ್ಟು.
ಧನು
ಗುರಿ ಸಾಧನೆ ತುಸು ಕಷ್ಟಕರವಾದೀತು. ಹೊಸ ವ್ಯವಹಾರದಲ್ಲಿ ತಕ್ಷಣ ಹಣ ಹೂಡಬೇಡಿ. ಪರಿಚಿತರೇ ನಿಮಗೆ ವಂಚನೆ ಮಾಡಬಹುದು, ಎಚ್ಚರ.
ಮಕರ
ಆಪ್ತರ ಸಲಹೆ ನಿಮಗೆ ಅಪಥ್ಯವಾದೀತು. ಆದರೆ ಅದಕ್ಕೆ ಕಿವಿಗೊಡಿ. ತೀರ್ಥಕ್ಷೇತ್ರ ಭೇಟಿ ಸಾಧ್ಯತೆ ಕಾಣುತ್ತಿದೆ. ಮಾನಸಿಕ ನೆಮ್ಮದಿಗೆ ಇದು ದಾರಿ.
ಕುಂಭ
ನಿಮ್ಮ ಆದರ್ಶ ಪಾಲಿಸಲು ಕೆಲವರು ಯತ್ನಿಸುವರು. ಇದು ನಿಮಗೆ ಸಲ್ಲುವ ಗೌರವ. ಇತರರ ನೋವಿಗೆ ಪರಿಹಾರ ತೋರುವಿರಿ.
ಮೀನ
ಕೆಲವರ ಜತೆ ಭಿನ್ನಾಭಿಪ್ರಾಯ ಮೂಡಿದರೆ ಅತಿರೇಕದ ವರ್ತನೆ ತೋರದಿರಿ. ಶಾಂತವಾಗಿ ವರ್ತಿಸಿ. ಮನೆಯಲ್ಲಿ ಹರುಷ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !