ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಯುಜಿಸಿಇಟಿ (KCET 2026) ಪರೀಕ್ಷೆಯ ಫಲಿತಾಂಶ ಇಂದು ಅಧಿಕೃತವಾಗಿ ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಫಲಿತಾಂಶ ಪ್ರಕಟಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮಧ್ಯಾಹ್ನದ ನಂತರ ಲಿಂಕ್ ಲೈವ್ ಆಗಲಿದೆ.
ಫಲಿತಾಂಶ ಪ್ರಕಟಣೆಯ ಸಮಯ
ಇಂದು ಮಧ್ಯಾಹ್ನ 12:00 ಗಂಟೆಗೆ ಕೆಇಎ ಅಧಿಕಾರಿಗಳು ಮತ್ತು ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಹಾಗೂ ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ಮಧ್ಯಾಹ್ನ 2:00 ಗಂಟೆಯಿಂದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ರ‍್ಯಾಂಕ್ ಕಾರ್ಡ್ ಅನ್ನು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಫಲಿತಾಂಶ ವೀಕ್ಷಿಸುವುದು ಹೇಗೆ?
ಮೊದಲು ಕೆಇಎ ಅಧಿಕೃತ ವೆಬ್‌ಸೈಟ್ karresults.nic.in ಅಥವಾ cetonline.karnataka.gov.in/kea ಗೆ ಭೇಟಿ ನೀಡಿ. ಹೋಮ್ ಪೇಜ್‌ನಲ್ಲಿ ಕಾಣಿಸುವ ‘UGCET 2026 Result’ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಸಂಖ್ಯೆ ಅನ್ನು ನಮೂದಿಸಿ. ನಿಮ್ಮ ಹೆಸರಿನ ಮೊದಲ 4 ಅಕ್ಷರಗಳನ್ನು ಟೈಪ್ ಮಾಡಿ ‘Submit’ ನೀಡಿ. ನಂತರ ಸ್ಕ್ರೀನ್ ಮೇಲೆ ನಿಮ್ಮ ಫಲಿತಾಂಶ ಮತ್ತು ರ‍್ಯಾಂಕ್ ಕಾಣಿಸುತ್ತದೆ.
ರ‍್ಯಾಂಕಿಂಗ್ ಮಾನದಂಡ
ಈ ಬಾರಿ ಇಂಜಿನಿಯರಿಂಗ್ ಸೇರಿದಂತೆ ಪ್ರಮುಖ ವೃತ್ತಿಪರ ಕೋರ್ಸ್‌ಗಳ ರ‍್ಯಾಂಕ್ ಪಟ್ಟಿಯನ್ನು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯ ಅಂಕಗಳು ಮತ್ತು ಸಿಇಟಿ ಪರೀಕ್ಷೆಯ ಅಂಕಗಳನ್ನು ಸಮನಾಗಿ ಪರಿಗಣಿಸಿ (50:50 ಅನುಪಾತ) ಸಿದ್ಧಪಡಿಸಲಾಗಿದೆ. ಫಲಿತಾಂಶದ ಬೆನ್ನಲ್ಲೇ ಕೌನ್ಸೆಲಿಂಗ್ ಹಾಗೂ ದಾಖಲಾತಿ ಪರಿಶೀಲನೆಯ ವೇಳಾಪಟ್ಟಿಯನ್ನು ಪ್ರಾಧಿಕಾರ ಬಿಡುಗಡೆ ಮಾಡಲಿದೆ.



