September 28, 2026
Monday, September 28, 2026
spot_img

FOOD | ಮನೆಯಲ್ಲೇ ಮಾಡಿ ಮೈಸೂರು ಶೈಲಿಯ ಹೆಸರುಬೇಳೆ ತೊವ್ವೆ: ಆರೋಗ್ಯಕರ ಮಧ್ಯಾಹ್ನದ ಊಟಕ್ಕೆ ಬೆಸ್ಟ್ ಚಾಯ್ಸ್!

ಹೆಸರುಬೇಳೆ ತೊವ್ವೆ ದಕ್ಷಿಣ ಭಾರತದ ಅತ್ಯಂತ ಸಾಂಪ್ರದಾಯಿಕ, ಸಾತ್ವಿಕ್ ಮತ್ತು ಸುಲಭವಾದ ಅಡುಗೆಯಾಗಿದೆ. ಇದು ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ ಹಾಗೂ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ
ನೀರು
ಹಸಿ ಮೆಣಸಿನಕಾಯಿ
ಶುಂಠಿ
ಅರಿಶಿನ ಪುಡಿ
ಉಪ್ಪು
ನಿಂಬೆ ರಸ
ಕೊತ್ತಂಬರಿ ಸೊಪ್ಪು
ತುಪ್ಪ
ಸಾಸಿವೆ ಮತ್ತು ಜೀರಿಗೆ
ಇಂಗು
ಕರಿಬೇವು
ಒಣ ಮೆಣಸಿನಕಾಯಿ

ಮಾಡುವ ವಿಧಾನ
ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ. ಅದಕ್ಕೆ 1.5 ಕಪ್ ನೀರು, ಅರಿಶಿನ ಪುಡಿ ಮತ್ತು 1/2 ಚಮಚ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ, ಮುಚ್ಚಳ ಮುಚ್ಚಿ 3 ವಿಸಿಲ್ ಕೂಗಿಸಿದ ನಂತರ ಒಂದು ಪಾತ್ರೆ ಅಥವಾ ಬಾಣಲೆಯಲ್ಲಿ 1 ಚಮಚ ತುಪ್ಪವನ್ನು ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿದ ನಂತರ, ಒಣ ಮೆಣಸಿನಕಾಯಿ, ಸೀಳಿದ ಹಸಿರು ಮೆಣಸಿನಕಾಯಿ, ತುರಿದ ಶುಂಠಿ, ಇಂಗು ಮತ್ತು ಕರಿಬೇವು ಸೇರಿಸಿ 30 ಸೆಕೆಂಡುಗಳ ಕಾಲ ಕಡಿಮೆ ಉರಿಯಲ್ಲಿ ಲಘುವಾಗಿ ಹುರಿಯಬೇಕು. ಬಳಿಕ ಬೇಯಿಸಿದ ಹೆಸರುಬೇಳೆಯನ್ನು ಈ ಒಗ್ಗರಣೆಗೆ ಸುರಿದು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಮಧ್ಯಮ ಉರಿಯಲ್ಲಿ 3 ರಿಂದ 4 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು 1 ಚಮಚ ನಿಂಬೆ ರಸವನ್ನು ಹಿಂಡಿ ಒಮ್ಮೆ ಕೈಯಾಡಿಸಿದರೆ ಘಮಘಮಿಸುವ, ಮೃದುವಾದ ಹೆಸರುಬೇಳೆ ತೊವ್ವೆ ಸಿದ್ಧವಾಗುತ್ತದೆ.

Must Read