ಮೇಷ
ಏರಿಳಿತ ಎರಡನ್ನೂ ಇಂದು ಎದುರಿಸುವಿರಿ. ಖಾಸಗಿ ಬದುಕು ಮತ್ತು ವೃತ್ತಿ ಮಧ್ಯೆ ಸಮತೋಲನ ಸಾಧಿಸಿ. ಯಾವುದೇ ಒಂದನ್ನು ಕಡೆಗಣಿಸಬೇಡಿ.
ವೃಷಭ
ಯಾರದೋ ದುರ್ವರ್ತನೆ ನಿಮ್ಮ ಮನಸ್ಸು ಕದಡಬಹುದು. ಅನಗತ್ಯ ವಸ್ತುವಿನ ಮೇಲೆ ಹೆಚ್ಚು ಹಣ ವ್ಯಯಿಸದಿರಿ. ಆರೋಗ್ಯ ಸಮಸ್ಯೆ.
ಮಿಥುನ
ಕಚೇರಿ ರಾಜಕೀಯದಿಂದ ದೂರವಿರಿ. ನಿಮ್ಮ ಗಮನ ಉತ್ತಮ ಕಾರ್ಯದೆಡೆಗೆ ಹರಿಸಿ. ಸಣ್ಣ ವಿಷಯಕ್ಕೆ ಸಂಗಾತಿ ಜತೆ
ಜಗಳವಾದೀತು.
ಕಟಕ
ಅಚ್ಚರಿಯ ಬೆಳವಣಿಗೆ ಸಂಭವ. ಫಲ ನೀಡದ ಯೋಜನೆ ಕೈಬಿಡಿ. ವ್ಯಕ್ತಿಯೊಬ್ಬರು ಹೆಚ್ಚು ಆಪ್ತರಾಗುವರು. ಖರ್ಚು ಹೆಚ್ಚಳದ ಚಿಂತೆ.
ಸಿಂಹ
ನಿಮ್ಮ ಸಹನೆ ಪರೀಕ್ಷಿಸುವ ಪ್ರಸಂಗ ಉಂಟಾದೀತು. ಸಂಬಂಧ ದಲ್ಲಿ ಏರುಪೇರು. ವೃತ್ತಿಯ ಗುರಿ ಸಾಧನೆ ಕಷ್ಟ. ಅಡ್ಡಿ ಒದಗಲಿದೆ.
ಕನ್ಯಾ
ಫಲಪ್ರದ ದಿನ. ಉದ್ದೇಶ ಸಫಲ. ಆಹಾರದಲ್ಲಿ ಪಥ್ಯ ಸಾಧಿಸಿ. ಆರೋಗ್ಯ ಕೆಡಿಸುವ ತಿನಿಸಿನಿಂದ ದೂರವಿರಿ. ಬಂಧು ಜತೆ ವಿರಸ.
ತುಲಾ
ವೃತ್ತಿಯಲ್ಲಿ ಯಶಸ್ಸು. ಆರ್ಥಿಕ ಉನ್ನತಿ. ಹಳೆಯ ಹೂಡಿಕೆ ಲಾಭ ತರಲಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ಸೂಕ್ತ ಫಲ ಸಿಗಲಿದೆ. ಒತ್ತಡ ನಿವಾರಣೆ.
ವೃಶ್ಚಿಕ
ಇಂದು ಕೆಲವು ಪ್ರಮುಖ ನಿರ್ಧಾರ ತಾಳಬೇಕಾಗುವುದು. ಲೋಪ ಕಂಡರೆ ಕೂಡಲೇ ತಿದ್ದಿಕೊಳ್ಳಿ. ಬಿಗುಮಾನ ಬೇಕಿಲ್ಲ. ಧನವ್ಯಯ.
ಧನು
ಇಂದು ಶುಭದಿನ. ಪ್ರೀತಿಯ ಅಹವಾಲಿಗೆ ಸೂಕ್ತ ಸ್ಪಂದನೆ ಸಿಗಲಿದೆ. ಕೌಟುಂಬಿಕ ಸಮಸ್ಯೆ ಪರಿಹಾರ. ಮನಸ್ಸಿಗೆ ನಿರಾಳತೆ, ನೆಮ್ಮದಿ.
ಮಕರ
ಹುಚ್ಚು ಸಾಹಸಕ್ಕೆ ಮುಂದಾಗಬೇಡಿ. ನಿಯಂತ್ರಣ ಅಗತ್ಯ. ಉತ್ಸಾಹದ ನಡೆ ಪ್ರತಿಕೂಲ ಪರಿಣಾಮ ತರಬಹುದು. ವಿರೋಧ ಕಟ್ಟಿಕೊಳ್ಳುವಿರಿ.
ಕುಂಭ
ಮನೆಯವರ ಜತೆ ಹೊಂದಾಣಿಕೆ ಇರಲಿ. ನಿಮ್ಮ ಆದೇಶ ಹೇರಬೇಡಿ. ಖರ್ಚು ನಿಯಂತ್ರಿಸಿ. ಆಪ್ತ ಬಂಧುವಿನ ರೋಷ ಎದುರಿಸುವಿರಿ.
ಮೀನ
ಕೈಗೊಂಡ ಕಾರ್ಯ ಮುಗಿಸಲು ಗಮನ ಕೊಡಿ. ಹದಗೆಟ್ಟ ಸಂಬಂಧ ದೀರ್ಘ ಎಳೆಯಬೇಡಿ. ನಿಮಗೆ ಸೂಕ್ತವೆನಿಸದ ವಿಷಯ ಅಲ್ಲಿಗೇ ಬಿಡಿ.



