ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಿವೆ. ಇಂಗ್ಲೆಂಡ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ .
ಟೂರ್ನಿಯಲ್ಲಿ ಮೊದಲ ಮುಖಾಮುಖಿ
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೊದಲ ಪಂದ್ಯವಾಗಿದೆ. ಉಭಯ ತಂಡಗಳು ಟಿ20 ವಿಶ್ವಕಪ್ನಲ್ಲಿ 8 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 2 ಪಂದ್ಯಗಳನ್ನು ಗೆದ್ದಿದೆ.
ಟೀಮ್ ಪ್ರಕಟ
ಪಾಕಿಸ್ತಾನ: ಗುಲ್ ಫಿರೋಜಾ, ಮುನೀಬಾ ಅಲಿ (ವಿಕೀ), ಆಯೇಶಾ ಜಾಫರ್, ಸೈರಾ ಜಬೀನ್, ನತಾಲಿಯಾ ಪರ್ವೈಜ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕ), ರಮೀನ್ ಶಮೀಮ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ತಸ್ಮಿಯಾ ರುಬಾಬ್
ಭಾರತ: ಸ್ಮೃತಿ ಮಂಧಾನ , ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ (ನಾಯಕ), ರಿಚಾ ಘೋಷ್ (ವಿಕೆ), ದೀಪ್ತಿ ಶರ್ಮಾ, ಭಾರತಿ ಫುಲ್ಮಾಲಿ, ಶ್ರೀ ಚರಣಿ, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ



