June 20, 2026
Saturday, June 20, 2026
spot_img

ಇಂದು ಸೋಮವಾರದ ಅಮಾವಾಸ್ಯೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪವಿತ್ರ ಪುಣ್ಯಕ್ಷೇತ್ರವಾದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಇಂದು ಸೋಮವಾರ ಅಮಾವಾಸ್ಯೆ ಇರುವ ಕಾರಣ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ.

ಸಾಮಾನ್ಯವಾಗಿ ಮಹದೇಶ್ವರ ಸ್ವಾಮಿಗೆ ಸೋಮವಾರದಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಬಾರಿ ಸೋಮವಾರ ಅಮಾವಾಸ್ಯೆ ಕೂಡ ಬಂದಿರುವ ಕಾರಣ ಮಾದಪ್ಪನ ದರುಶನಕ್ಕೆ ರಾಜ್ಯದ ಎಲ್ಲ ಸ್ಥಳಗಳಿಂದ ಭಕ್ತರು ಆಗಮಿಸಿದ್ದಾರೆ.

ಮುಂಜಾನೆಯೇ ಮಹದೇಶ್ವರ ಬೆಟ್ಟದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಬೆಳಗ್ಗಿನ ಜಾವದಿಂದಲೇ ಭಕ್ತರು ಕ್ಯೂ ನಿಂತಿದ್ದಾರೆ. ಅಮಾವಾಸ್ಯೆಯ ವಿಶೇಷ ದಿನವಾದ ಇಂದು ಮುಂಜಾನೆಯಿಂದಲೇ ಶ್ರೀ ಮಹದೇಶ್ವರ ಸ್ವಾಮಿಗೆ ವಿಶೇಷ ಎಣ್ಣೆ ಮಜ್ಜನ ಹಾಗೂ ಅತ್ಯಂತ ಆಕರ್ಷಕ ಪುಷ್ಪಾಲಂಕಾರಗಳನ್ನು ನೆರವೇರಿಸಲಾಯಿತು. ಸಹಸ್ರಾರು ಭಕ್ತರು ಏಕಕಾಲದಲ್ಲಿ ಬೆಟ್ಟಕ್ಕೆ ಲಗ್ಗೆ ಇಟ್ಟಿರುವುದರಿಂದ ಮಲೆ ಮಹದೇಶ್ವರ ಬೆಟ್ಟದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಸಂಪೂರ್ಣವಾಗಿ ಜನಸಾಗರದಿಂದ ತುಂಬಿ ತುಳುಕುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !