September 28, 2026
Monday, September 28, 2026
spot_img

‘ಸಿದ್ದರಾಮಯ್ಯ ಆಯೋಜಿಸಿದ ಕಾರ್ಯಕ್ರಮವಲ್ಲ’: ಅಹಿಂದ ಒಕ್ಕೂಟದ ಸಮಾವೇಶದ ಬಗ್ಗೆ ಸಚಿವ ಯತೀಂದ್ರ ಹೇಳಿದ್ದೇನು?

ಹೊಸದಿಗಂತ ವರದಿ ರಾಯಚೂರು:

ಅಹಿಂದ ಒಕ್ಕೂಟದ ಕಾರ್ಯಕ್ರಮಕ್ಕೂ ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಒಕ್ಕೂಟದವರ ಕಾರ್ಯಕ್ರಮಕ್ಕೆ ಕರೆದಿದ್ದರಿಂದ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರಷ್ಟೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ನಗಾಭಿವೃದ್ಧಿ ಇಲಾಖೆಗೆ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಭಾನುವಾರ ಜರುಗಿದ ಅಹಿಂದ ಸಂಘಟನೆಗಳ ಒಕ್ಕೂಟಕ್ಕೆ 25 ವರ್ಷದ ತುಂಬಿದ ಪ್ರಯುಕ್ತ ಒಕ್ಕೂಟದವರು ಬೆಳ್ಳಿಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು ಆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರಿಗೂ ಆಹ್ವಾನವಿತ್ತು ಹೀಗಾಗಿ ಆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು ಎಂದರು.

ಈ ಕಾರ್ಯಕ್ರಮ ಅಹಿಂದ ಕಾರ್ಯಕ್ರಮವಲ್ಲ. ಇದನ್ನು ಸಿದ್ದರಾಮ್ಯ ಅವರು ಆಯೋಜನೆ ಮಾಡಿಲ್ಲ. ಇದು ಪಕ್ಷದ್ದೂ ಅಲ್ಲ. ಅಹಿಂದ ಸಂಘಟನೆಯ ಕಾರ್ಯಕ್ರಮವೂ ಅಲ್ಲ ಇದು ಅಹಿಂದ ಸಂಘಟನೆಗಳ ಒಕ್ಕೂಟ ಕಾರ್ಯಕ್ರಮ ಎನ್ನುವುದನ್ನು ಎಲ್ಲರೂ ಮೊದಲು ತಿಳಿದುಕೊಳ್ಳಬೇಕು. ಒಕ್ಕೂಟದವರು ದೊಡ್ಡ ಮಟ್ಟದ ಯಶಸ್ವಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಸಚಿವ ಯತೀಂದ್ರ ಹೇಳಿದರು.

ಇದನ್ನೂ ಓದಿ:

ಈ ಅಹಿಂದ ಒಕ್ಕೂಟದ ಸಮಾವೇಶಕ್ಕೆ ನನ್ನನ್ನು ಆಹ್ವಾನಿಸಿದ್ದರೆ ನಾನೂ ಹೋಗುತ್ತಿದ್ದೆ ಆದರೆ ನನಗೆ ಆಹ್ವಾನವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಪ್ರತಿಕ್ರೀಯಿಸಿದ ಸಚಿವ ಯತೀಂದ್ರ, ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲವಲ್ಲ. ಯಾವುದೇ ರಾಜಕೀಯ ನಾಯಕರು ಮಾಡಿದ ಕಾರ್ಯಕ್ರಮ ಅಲ್ಲ. ಕರೆಯೋದು ಬಿಡೋದು ಒಕ್ಕೂಟದವರಿಗೆ ಬಿಟ್ಟಿದ್ದು. ಇಂತವರನ್ನೇ ಕರೆಯಿರಿ, ಇಂತವರನ್ನೇ ಬಿಡಿ ಎಂದು ಹೇಳೋಕೆ ಬರಲ್ಲ. ಅಹಿಂದಾ ಯಾರ ಸ್ವತ್ತು ಅಲ್ಲ. ಭಾನುವಾರ ನಡೆದಿರುವುದು ಅಹಿಂದಾ ಸಭೆ ಅಲ್ಲ ಅದು ಒಕ್ಕೂಟದ ಸಭೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಬಿಜೆಪಿ ಅವರು ಕೂತು ಕೂತು ಸೋಮಾರಿಗಳಾಗಿದ್ದರು. ಕ್ರಿಯಾಶೀಲರಾಗಬೇಕು ಅಂದುಕೊಂಡು ಪಾದಯಾತ್ರೆ ಶುರು ಮಾಡಿದ್ದಾರೆ. ಪಾದಯಾತ್ರೆಯಿಂದ ಏನೂ ಪ್ರಯೋಜನವಿಲ್ಲ. ಬಿಜೆಪಿ ಅವರ ಪಾದಯಾತ್ರೆ ಉದ್ದೇಶ ಈಡೇರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಚಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಬಸವಗೌಡ ದದ್ದಲ, ವಿ.ಪ ಸದಸ್ಯ ಎ.ವಸಂತಕುಮಾರ ಇದ್ದರು.

Must Read