June 16, 2026
Tuesday, June 16, 2026
spot_img

ಟಿಪ್ಪರ್- ಬೈಕ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ದುರ್ಮ*ರಣ

ಹೊಸದಿಗಂತ ವರದಿ ವಿಜಯಪುರ:

ಟಿಪ್ಪರ್ ಹಾಗೂ ಬೈಕ್ ಡಿಕ್ಕಿಯಾಗಿ ಮೂರು ಜನ ಬೈಕ್ ಸವಾರರ ಪೈಕಿ, ಇಬ್ಬರು ಸ್ಥಳದಲ್ಲಿಯೇ ದಾರುಣವಾಗಿ ಸಾವಿಗೀಡಾಗಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಮರಗೂರ ಸಕ್ಕರೆ ಕಾರ್ಖಾನೆ ಎದುರು ನಡೆದಿದೆ.

ಮೃತಪಟ್ಟವರನ್ನು ಗೋರನಾಳ ಗ್ರಾಮದ ಧರ್ಮಣ್ಣ ಯಲ್ಲಪ್ಪ ಹೊಸಮನಿ (41), ಬೀರಪ್ಪ ಕಲ್ಲಪ್ಪ ಪೂಜಾರಿ (25) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:

ಧರ್ಮಣ ಹೊಸಮನಿ, ಬೀರಪ್ಪ ಪೂಜಾರಿ, ಸೋಮಯ್ಯ ಹಿರೇಮಠ ಮೂವರು ಒಂದೇ ಬೈಕ್ ನಲ್ಲಿ ಧೋಳಖೇಡ ಕಡೆಗೆ ಹೋಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಟಿಪ್ಟರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತವಾಗಿದ್ದು, ಸ್ಥಳದಲ್ಲಿಯೇ ಧರ್ಮಣ್ಣ, ಬೀರಪ್ಪ ಇಬ್ಬರು ಅಸುನೀಗಿದ್ದು, ಸೋಮಯ್ಯ ಹಿರೇಮಠ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳುವನ್ನು ಚಿಕಿತ್ಸೆಗಾಗಿ ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !