August 6, 2026
Thursday, August 6, 2026
spot_img

ಫಲಿಸದ ಪ್ರಾರ್ಥನೆ: ಕಡ್ಲೆ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ

ಹೊಸದಿಗಂತ ವರದಿ ಕುಮಟಾ:

ತಾಲೂಕಿನ ಕಡ್ಲೆ ಸಮುದ್ರ ತೀರದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗಿ ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಮಂಗಳವಾರ ಬೆಳಿಗ್ಗೆ
ಪತ್ತೆಯಾಗಿದೆ.

ಸೋಮವಾರ ಮಧ್ಯಾಹ್ನ ಗೆಳೆಯರ ಜೊತೆ ಕಡ್ಲೆ ಸಮುದ್ರ ತೀರದಲ್ಲಿ ನೀರಿಗಿಳಿದ ಸಂದರ್ಭದಲ್ಲಿ ಪೂಣಾ ಮೂಲದ ಜೀವನ್ ಭಟ್ರಾಯಿ(26) ಎಂಬ ಯುವಕ ಅಲೆಗಳ ಜೊತೆ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದ.

ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳದ ಸಿಬ್ಬಂದಿ ಸಾಕಷ್ಟು ಶೋಧಕಾರ್ಯ ನಡೆಸಿದರೂ ಮೃತ ದೇಹ ಪತ್ತೆಯಾಗಿರಲಿಲ್ಲ.

ಮಂಗಳವಾರ ಮುಂಜಾನೆ ಕುಮಟಾದ ಕಡೆಕೋಡಿ ಸಮುದ್ರ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಮೃತದೇಹವನ್ನು ದಡಕ್ಕೆ ಸಾಗಿಸುವ ಕಾರ್ಯ ನಡೆಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !