Thursday, October 2, 2025

FOOD | ಬಿಸಿ ಬಿಸಿ ಚಹಾದ ಜೊತೆ ಮಶ್ರೂಮ್ ಬಜ್ಜಿ ತಿಂತಿದ್ರೆ ಅದೇ ಸ್ವರ್ಗ ಕಣ್ರೀ…

ಅಣಬೆ (Mushroom) ಆರೋಗ್ಯಕರ ಹಾಗೂ ರುಚಿಕರವಾದ ಒಂದು ತರಕಾರಿ. ಇದರಲ್ಲಿ ವಿಟಮಿನ್, ಖನಿಜಗಳು ಹಾಗೂ ಪ್ರೋಟೀನ್‌ಗಳು ಸಮೃದ್ಧವಾಗಿವೆ. ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಬಿಸಿಬಿಸಿ ಬಜ್ಜಿ ತಿನ್ನುವ ಖುಷಿಯೇ ಬೇರೆ. ಅಣಬೆ ಬಳಸಿ ಮಾಡಿದ ಬಜ್ಜಿ ಹೊರಗೆ ಕ್ರಿಸ್ಪಿ, ಒಳಗೆ ಸಾಫ್ಟ್ ಆಗಿರುತ್ತೆ.

ಬೇಕಾಗುವ ಸಾಮಗ್ರಿಗಳು:

ಅಣಬೆ – 10 ರಿಂದ 12
ಕಡಲೆಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಟೀ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಹಸಿಮೆಣಸಿನ ಪೇಸ್ಟ್ – ½ ಟೀ ಸ್ಪೂನ್
ಅರಶಿನ ಪುಡಿ – ¼ ಟೀ ಸ್ಪೂನ್
ಅಜ್ವೈನ್ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸೋಡಾ – ಚಿಟಿಕೆ
ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಕರಿಯಲು

ತಯಾರಿಸುವ ವಿಧಾನ:

ಮೊದಲು ಅಣಬೆಗಳನ್ನು ಚೆನ್ನಾಗಿ ತೊಳೆದು, ಒಣಗಿಸಿಟ್ಟುಕೊಳ್ಳಿ. ಒಂದು ಬಟ್ಟಲಿನಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಹಸಿಮೆಣಸಿನ ಪೇಸ್ಟ್, ಅರಶಿನ, ಅಜ್ವೈನ್, ಉಪ್ಪು ಹಾಗೂ ಚಿಟಿಕೆ ಸೋಡಾ ಹಾಕಿ ಮಿಶ್ರಣ ಮಾಡಿ.

ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ದಪ್ಪವಾದ ಬಜ್ಜಿ ಹಿಟ್ಟಿನ ತಯಾರಿಸಿ. ಈಗ ಎಣ್ಣೆ ಬಿಸಿ ಮಾಡಿ ಒಂದೊಂದೇ ಅಣಬೆಗಳನ್ನು ಹಿಟ್ಟಿನಲ್ಲಿ ಮುಳುಗಿಸಿ ಬಿಸಿ ಎಣ್ಣೆಯಲ್ಲಿ ಕರಿದರೆ ಮಶ್ರೂಮ್ ಬಜ್ಜಿ ರೆಡಿ.