June 19, 2026
Friday, June 19, 2026
spot_img

ಮಾಜಿ ಸಿಎಂ ಸಿದ್ದರಾಮಯ್ಯಗೆ ಬೆಂಗಳೂರಿನ ಫೇಮಸ್ ವಿದ್ಯಾರ್ಥಿ ಭವನ ಮಸಾಲೆ ದೋಸೆ‌ ಸಖತ್‌ ಇಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಜಿ ಸಿಎಂ ಸಿದ್ದರಾಮಯ್ಯಗೆ ಬೆಂಗಳೂರಿನ ಒಜಿ ವಿದ್ಯಾರ್ಥಿ ಭವನ ಮಸಾಲೆ ದೋಸೆ ಫೇವರೆಟ್‌!

ಸಿಎಂ ಹುದ್ದೆಯಿಂದ ಕೆಳಗಿಳಿದಿರುವ ಸಿದ್ದರಾಮಯ್ಯ ಇದೀಗ ಸಣ್ಣ ಮಟ್ಟಿಗೆ ರಿಲ್ಯಾಕ್ಸ್‌ ಮೋಡ್‌ನಲ್ಲಿದ್ದಾರೆ. ಸಿದ್ದರಾಮಯ್ಯ ಯಾವುದೇ ಊರಿಗೆ ಹೋಗಲಿ ಅಲ್ಲಿಯ ಲೋಕಲ್‌ ಬೆಸ್ಟ್‌ ಊಟ ತಿಂಡಿಯನ್ನು ಸವಿಯೋದು ಅವರಿಗೆ ಅಭ್ಯಾಸ. ಅದೇ ರೀತಿ ಯಾವುದೇ ಸಮಯ ಗಾಂಧಿ ಬಜಾರ್‌ ಕಡೆ ಬಂದರೆ ಸಿದ್ದರಾಮಯ್ಯ ವಿದ್ಯಾರ್ಥಿ ಭವನದ ಮಸಾಲೆ ದೋಸೆ, ಉಪ್ಪಿಟ್ಟು ಹಾಗೂ ರವೆ ವಡೆಯನ್ನು ಮಿಸ್‌ ಮಾಡೋದಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದಾಗ, ಹೋಟೆಲ್‌ನಲ್ಲಿದ್ದ ಜನರು ಅವರನ್ನು ಉತ್ಸಾಹದಿಂದ ಬರಮಾಡಿಕೊಂಡರು. ಸಾರ್ವಜನಿಕರು ಹಾಗೂ ಗ್ರಾಹಕರು ಅವರೊಂದಿಗೆ ಕೆಲ ಹೊತ್ತು ಮಾತನಾಡಿ ಸೆಲ್ಫಿಗಳನ್ನು ತೆಗೆದುಕೊಂಡು ತಮ್ಮ ಸಂತಸವನ್ನು ಹಂಚಿಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !