June 19, 2026
Friday, June 19, 2026
spot_img

Gold Rate Today: ಸಾರ್ವಕಾಲಿಕ ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ: ಖರೀದಿಗೆ ಸಕಾಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶುಕ್ರವಾರದಂದು ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗಣನೀಯವಾಗಿ ಕುಸಿದಿದೆ. 10 ಗ್ರಾಂ ಆಭರಣ ಚಿನ್ನದ ದರದಲ್ಲಿ ಬರೋಬ್ಬರಿ 3,550 ರೂಪಾಯಿಗಳಷ್ಟು ಇಳಿಕೆ ಕಂಡುಬಂದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ತಗ್ಗಿದೆ.

ಕ್ಯಾರೆಟ್ ಆಧಾರಿತ ಇಂದಿನ ಚಿನ್ನದ ದರ

22 ಕ್ಯಾರೆಟ್ ಆಭರಣ ಚಿನ್ನ: ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,33,700 ರೂಪಾಯಿ ತಲುಪಿದೆ.

24 ಕ್ಯಾರೆಟ್ ಅಪರಂಜಿ ಚಿನ್ನ: ಶುದ್ಧ ಚಿನ್ನದ ಬೆಲೆಯಲ್ಲಿ 15,000 ರೂ.ಗಿಂತಲೂ ಹೆಚ್ಚಿನ ಕುಸಿತ ದಾಖಲಾಗಿದ್ದು, ಪ್ರಸ್ತುತ 10 ಗ್ರಾಂಗೆ 1,45,860 ರೂಪಾಯಿ ಆಗಿದೆ.

18 ಕ್ಯಾರೆಟ್ ಚಿನ್ನ: ಇದರ ದರವು ಸದ್ಯ 11,000 ರೂಪಾಯಿಗಳ ಗಡಿಯೊಳಗೆ ಬಂದು ತಲುಪಿದೆ.

ಬೆಂಗಳೂರು ಹಾಗೂ ಇತರೆಡೆ ಬೆಳ್ಳಿ ದರ ಎಷ್ಟು?

ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಇಳಿಕೆಯ ಹಾದಿ ಹಿಡಿದಿದೆ. ನಿನ್ನೆ 5 ರೂ. ಇಳಿಕೆ ಕಂಡಿದ್ದ ಬೆಳ್ಳಿ, ಇಂದು ಮತ್ತೆ 10 ರೂ. ಅಗ್ಗವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 1,33,700 ರೂ. ಇದ್ದರೆ, 100 ಗ್ರಾಂ ಬೆಳ್ಳಿಯ ಬೆಲೆ 25,000 ರೂಪಾಯಿ ಇದೆ. ಇನ್ನು ನೆರೆರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ 100 ಗ್ರಾಂ ಬೆಳ್ಳಿ ದರ 26,000 ರೂಪಾಯಿ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !