August 20, 2026
Thursday, August 20, 2026
spot_img

ತಿರುಪತಿ ಶ್ರೀನಿವಾಸನ ಪಾದಕ್ಕೆ ಶಿರಬಾಗಿದ ಸಿಎಂ ಡಿ.ಕೆ.ಶಿ ದಂಪತಿ: ನಾಡಿನ ಒಳಿತಿಗಾಗಿ ಪ್ರಾರ್ಥನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ದಾಖಲಿಸುತ್ತಿದ್ದಂತೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿರುಪತಿ ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮೊದಲಿನಿಂದಲೂ ದೈವಭಕ್ತರಾಗಿರುವ ಡಿಕೆಶಿ, ಈ ಯಶಸ್ಸಿನ ಬಳಿಕ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಪತ್ನಿ ಸಮೇತರಾಗಿ ವಿಶೇಷ ಪೂಜೆ
ಶುಕ್ರವಾರ ಮುಂಜಾನೆಯೇ ಪತ್ನಿ ಉಷಾ ಶಿವಕುಮಾರ್ ಅವರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಶ್ರೀವಾರಿ ದಿವ್ಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಭಕ್ತಿಯ ಕ್ಷಣಗಳ ಸುಂದರ ಫೋಟೋಗಳನ್ನು ಡಿಕೆಶಿ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಾಡಿನ ಒಳಿತಿಗಾಗಿ ಡಿಕೆಶಿ ಪ್ರಾರ್ಥನೆ
“ಧರ್ಮಪತ್ನಿಯೊಂದಿಗೆ ತಿರುಪತಿ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದಿದ್ದೇನೆ. ಜಗದೋದ್ಧಾರಕ ಶ್ರೀನಿವಾಸನ ಅನುಗ್ರಹ ಎಲ್ಲರ ಮೇಲಿರಲಿ, ನಮ್ಮ ಕಲ್ಯಾಣ ರಾಜ್ಯ ಮತ್ತಷ್ಟು ಸಮೃದ್ಧಿಯಾಗಲಿ ಎಂದು ನಾಡಿನ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ” ಎಂದು ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !