June 21, 2026
Sunday, June 21, 2026
spot_img

ದಿನಭವಿಷ್ಯ: ಬಿಗುಮಾನ ಬಿಟ್ಟು ವ್ಯವಹರಿಸಿ, ಆರೋಗ್ಯದ ಸಮಸ್ಯೆ ಕಡೆಗಣಿಸಬೇಡಿ

ಮೇಷ
ಮನೆಯಲ್ಲಿ ಕೆಟ್ಟಿರುವ ಸಂಬಂಧ ಸುಧಾರಣೆಗೆ ಗಮನ ಕೊಡಿ. ಬಿಗುಮಾನ ಬಿಟ್ಟು ವ್ಯವಹರಿಸಿ. ಬಂಧು ಭೇಟಿಯಿಂದ ಸಮಾಧಾನ.
ವೃಷಭ
ನಿಮ್ಮ ಗುರಿ ಈಡೇರಬೇಕಾದರೆ ವಸ್ತುಸ್ಥಿತಿ ಅರಿಯಿರಿ. ಕೆಲ ವಿಷಯಗಳಲ್ಲಿ ಭ್ರಮೆ ಬಿಡಿ. ಮನೆಯವರ ಬೆಂಬಲ ಪಡೆಯಿರಿ.
ಮಿಥುನ
ಮಾಡುವ ಕೆಲಸ ದಲ್ಲಿ ಸಫಲತೆ. ಆದರೆ ಸುಲಭದಲ್ಲಿ ಆಗದು. ಅಡ್ಡಿ, ವಿಳಂಬ ಸಾಧ್ಯತೆ. ಕೌಟುಂಬಿಕ ಮನಸ್ತಾಪ ನೆಮ್ಮದಿ ಕೆಡಿಸುವುದು.
ಕಟಕ
ಭಿನ್ನಾಭಿಪ್ರಾಯ ನಿವಾರಣೆ. ಅನಿರೀಕ್ಷಿತ ವಿದ್ಯಮಾನ ಸಂಭವಿಸಿದರೆ ಅಂಜಬೇಡಿ. ವಿಶ್ವಾಸ ದಿಂದ ಎದುರಿಸಿ. ನೆರೆಮನೆ
ಯವರ ಕಿರಿಕಿರಿ.
ಸಿಂಹ
ವೃತ್ತಿಯಲ್ಲಿ ಯಶಸ್ಸು. ಮನೆಯಲ್ಲಿ ಸೌಹಾರ್ದ. ಬಂಧುಗಳ ಭೇಟಿ. ಧನವ್ಯಯ ಹೆಚ್ಚಾದರೂ ಬೇಸರ ಮೂಡದು.
ಕನ್ಯಾ
ಮಾನಸಿಕ ಅಶಾಂತಿ. ಕೆಲಸದಲ್ಲಿ ನಿರಾಸಕ್ತಿ. ವ್ಯವಹಾರದಲ್ಲಿ ತೊಡಕು. ಎಲ್ಲರ ಜತೆ ಹೊಂದಾಣಿಕೆ ಬೆಳೆಸಿ. ಭಿನ್ನವಾಗಿ ವರ್ತಿಸಲು ಹೋಗದಿರಿ.
ತುಲಾ
ನಿಮ್ಮ ಪಾಲಿಗೆ ಅಚ್ಚರಿಯ ಬೆಳವಣಿಗೆ. ವೃತ್ತಿ ಸಮಸ್ಯೆಯೊಂದು ಪರಿಹಾರ ಕಾಣಲಿದೆ. ಕುಟುಂಬಸ್ಥರ ಹಿತ ಕಾಯುವಲ್ಲಿ ಸಫಲ.
ವೃಶ್ಚಿಕ
ವೃತ್ತಿ ಒತ್ತಡ ಕಡಿಮೆ ಮಾಡಿಕೊಳ್ಳಿ. ಇಲ್ಲವಾದರೆ ಆರೋಗ್ಯದ ಮೇಲೆ ಪರಿಣಾಮ. ಮೆಚ್ಚಿನ ಹವ್ಯಾಸದಲ್ಲಿ ಚಿಂತೆ ಮರೆಯಲೆತ್ನಿಸಿ.
ಧನು
ಮನೆಯಲ್ಲಿ ಶಾಂತಿ, ಸೌಹಾರ್ದ. ಹಣದ ವ್ಯವಹಾರ ಸಫಲ. ಆರೋಗ್ಯದ ಚಿಂತೆ ಪರಿಹಾರ. ಮಕ್ಕಳ ಸಾಧನೆಯ ಖುಷಿ.
ಮಕರ
ಆದಾಯ ಹೆಚ್ಚಳದ ಸಂಕೇತ ತೋರಲಿದೆ. ಎಲ್ಲರಿಂದ ಉತ್ತಮ ಸಹಕಾರ ಪಡೆಯುವಿರಿ. ಆರೋಗ್ಯದ ಸಮಸ್ಯೆ ಕಡೆಗಣಿಸಬೇಡಿ.
ಕುಂಭ
ವೃತ್ತಿಯಲ್ಲಿ ಯಾವುದೇ ಕೆಲಸ ಬಾಕಿ ಉಳಿಸಬೇಡಿ. ವಿಳಂಬ ದೊಡ್ಡ ಹಾನಿ ತಂದೀತು. ಅನಾರೋಗ್ಯಕರ ಆಹಾರ ಸೇವಿಸಬೇಡಿ.
ಮೀನ
ಇತರರ ಜತೆ ವಿನಯದಿಂದ ವರ್ತಿಸಿ. ಇಲ್ಲವಾದರೆ ನಿಷ್ಟುರ ಕಟ್ಟಿಕೊಳ್ಳುವಿರಿ. ಆರ್ಥಿಕ ವ್ಯವಹಾರ ತುಸು ಚಿಂತೆಗೆ ಕಾರಣವಾದೀತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !