June 22, 2026
Monday, June 22, 2026
spot_img

ಹಗಲು, ರಾತ್ರಿ ಬ್ರಶ್‌ ಮಾಡಿದ್ರೆ ಒಸಡುಗಳೆಲ್ಲ ವೀಕ್‌ ಆಗೋದಿಲ್ವಾ? ರಾತ್ರಿ ಯಾಕೆ ಹಲ್ಲುಜ್ಜಬೇಕು?

ನಿತ್ಯವೂ ಬೆಳಗ್ಗೆ ನಿಮಿಷಗಟ್ಟಲೆ ಬ್ರಶ್‌ ಮಾಡ್ತೀವಿ, ನಂತರ ರಾತ್ರಿಯೂ ಬ್ರಶ್‌ ಮಾಡಿದ್ರೆ ಒಸಡುಗಳು ವೀಕ್‌ ಆಗೋದಿಲ್ವಾ? ಹಲ್ಲಿನ ಹೊಳಪು ಕಡಿಮೆ ಆಗೋದಿಲ್ವಾ? ಈ ರೀತಿ ಅನುಮಾನಗಳು ಸಾಮಾನ್ಯ. ಆದರೆ ಈ ಅನುಮಾನಗಳನ್ನು ಬದಿಗೊತ್ತಿ ದಿನಕ್ಕೆ ಎರಡು ಬಾರಿ ಬ್ರಶ್‌ ಮಾಡಿ. ಊಟದ ತಕ್ಷಣ ಬೇಡ. ಹದಿನೈದು ಇಪ್ಪತ್ತು ನಿಮಿಷ ಗ್ಯಾಪ್‌ ಕೊಟ್ಟು ಬ್ರಶ್‌ ಮಾಡಿ. ಇದರಿಂದ ಏನೆಲ್ಲಾ ಲಾಭ?

ಹಗಲಿನಲ್ಲಿ ರಾತ್ರಿ ತಿಂದ ಆಹಾರ ಹಲ್ಲಿನ ಸಂದುಗಳಲ್ಲಿಯೇ ಉಳಿದು ಹೋಗಿರುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ಒಂದು ರೀತಿಯ ಆಸಿಡ್‌ ಉತ್ಪಾದಿಸಿ ಹಲ್ಲಿನ ಹೊರ ಪದರವನ್ನು ಹಾಳು ಮಾಡುತ್ತವೆ. ರಾತ್ರಿ ಹಲ್ಲುಜ್ಜುವುದರಿಂದ ಈ ಅಪಾಯವನ್ನು ಕಡಿಮೆ ಮಾಡಬಹುದು.

ನಿದ್ರೆಯ ಸಮಯದಲ್ಲಿ ಬಾಯಿ ಒಣಗುವುದರಿಂದ, ಹಲ್ಲುಗಳನ್ನು ರಕ್ಷಿಸುವ ನೈಸರ್ಗಿಕ ಜೊಲ್ಲು ರಸದ ಪ್ರಮಾಣ ಕಡಿಮೆಯಿರುತ್ತದೆ. ಆದ್ದರಿಂದ ಮುಂಚಿತವಾಗಿ ಸ್ವಚ್ಛಗೊಳಿಸುವುದು ಅವಶ್ಯಕವಾಗಿರುತ್ತದೆ.

ಬ್ಯಾಕ್ಟೀರಿಯಾಗಳು ವಸಡುಗಳಲ್ಲಿ ಉರಿಯೂತ ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು. ನಿಯಮಿತ ರಾತ್ರಿ ಬ್ರಷ್ ಮಾಡುವುದರಿಂದ ವಸಡುಗಳು ಗಟ್ಟಿಯಾಗಿರುತ್ತವೆ. ಬ್ರಶ್‌ನಲ್ಲಿ ಹಲ್ಲುಜ್ಜಿದ ನಂತರ ಒಮ್ಮೆ ಕೈಯಲ್ಲಿ ಒಸಡುಗಳಿಗೆ ಮಸಾಜ್‌ ಮಾಡಿ.

ರಾತ್ರಿ ಬ್ರಷ್ ಮಾಡದೆ ಮಲಗಿದರೆ ಬೆಳಿಗ್ಗೆ ಏಳುವಾಗ ಬಾಯಿಯಲ್ಲಿ ಕೆಟ್ಟ ವಾಸನೆ ಉಂಟಾಗುತ್ತದೆ. ಮತ್ತೆ ನೀವು ಬೆಳಗ್ಗೆ ಹಾಗೆಯೇ ತಿಂಡಿ ತಿಂದು ಬ್ರಶ್‌ ಮಾಡಿದರೂ ಸಮಸ್ಯೆ ಬರೋದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !