ಮೇಷ
ನಿಮ್ಮ ಕೆರಿಯರ್ಗೆ ಆದ್ಯತೆ ಕೊಡಿ. ಹೊಣೆ ವಹಿಸಬೇಕಾದ ಸಮಯ ಬಂದಿದೆ. ಕಾಲಹರಣ ಮಾಡಬೇಡಿ. ಹಣದ ಕೊರತೆ ಕಾಡಬಹುದು.
ವೃಷಭ
ನಿಮ್ಮ ಬದುಕಲ್ಲಿ ಇತರರ ಹಸ್ತಕ್ಷೇಪ ಅಸಹನೆ ಮೂಡಿಸಲಿದೆ. ಆರ್ಥಿಕ ವ್ಯವಹಾರವೊಂದು ನೀವು ನಿರೀಕ್ಷಿಸಿದಂತೆ ಸಾಗದು. ಧನ ಹಾನಿ ಉಂಟಾದೀತು.
ಮಿಥುನ
ಗುರಿ ಸಾಧಿಸುವ ಛಲ ನಿಮ್ಮದು. ಕೋಪದಿಂದ ಎಗರಾಡುವ ಪ್ರಸಂಗ ಬಂದೀತು. ಇತರರನ್ನು ಅರಿತು ವ್ಯವಹರಿಸಲು ಪ್ರಯತ್ನಿಸಿ.
ಕಟಕ
ಅವಸರದ ಹೆಜ್ಜೆ ಇಡಬೇಡಿ. ಯೋಚಿಸಿ ಕಾರ್ಯವೆಸಗಿ. ಕಾಣದ ಕೈಗಳು ನಿಮ್ಮ ವಿರುದ್ಧ ಕಾರ್ಯಾಚರಿಸುತ್ತಿವೆ. ಕೌಟುಂಬಿಕ ಸೌಹಾರ್ದ.
ಸಿಂಹ
ನಿಮ್ಮ ಬದುಕು ಸರಿದಾರಿಯಲ್ಲಿ ಸಾಗುತ್ತಿದೆ ಎಂಬ ಭಾವ. ವಿಘ್ನಗಳು ನಿವಾರಣೆ. ದಂಪತಿಗಳಿಗೆ ಶುಭ ಬೆಳವಣಿಗೆ. ಆರ್ಥಿಕ ಕೊರತೆ ನೀಗಲಿದೆ.
ಕನ್ಯಾ
ಉತ್ಸಾಹದ ದಿನ. ಆದರೆ ಫಲ ನೀಡದ ಕಾರ್ಯಕ್ಕೆ ಎಳಸಬೇಡಿ. ಅಪರಿಚಿತರ ಜತೆ ಎಚ್ಚರದ ನಡೆಯಿರಲಿ. ಬೇಸ್ತು ಬೀಳುವ ಸಂಭವವಿದೆ.
ತುಲಾ
ವೃತ್ತಿಯಲ್ಲೂ ಖಾಸಗಿಯಾಗಿಯೂ ಉನ್ನತಿ. ದೊಡ್ಡ ಕಿರಿಕಿರಿಯೊಂದು ಅಂತ್ಯ. ಮನಸ್ಸಿಗೆ ನಿರಾಳತೆ. ಆರೋಗ್ಯ ಸುಸ್ಥಿರ.
ವೃಶ್ಚಿಕ
ಕುಟುಂಬದ ವ್ಯವಹಾರಕ್ಕೆ ಹೆಚ್ಚು ಗಮನ ಕೊಡಿ. ನಿಮ್ಮ ಮೇಲೆ ಒತ್ತಡ ಹೆಚ್ಚಲಿದೆ. ಹೊಸ ವ್ಯವಹಾರ ಆರಂಭಿಸಿದವರಿಗೆ ತೃಪ್ತಿಕರ ಬೆಳವಣಿಗೆ.
ಧನು
ನಿಮ್ಮ ನಿರ್ವಹಣೆ ಇತರರ ಗಮನಕ್ಕೆ ಬರಲಿದೆ. ಕೌಟುಂಬಿಕ ಸೌಹಾರ್ದ. ಮಕ್ಕಳ ಸಾಧನೆಯಿಂದ ತೃಪ್ತಿ. ಆರ್ಥಿಕ ಅಡ್ಡಿ ನಿವಾರಣೆ.
ಮಕರ
ಇತರರ ಜತೆ ಹೆಜ್ಜೆಯಿಟ್ಟು ಸಾಗಿ. ನಿಮ್ಮದೇ ವಿಭಿನ್ನ ದಾರಿ ತುಳಿಯದಿರಿ. ಪರಸ್ಪರ ಸಹಕಾರ ಅಗತ್ಯ. ಕೆಲವು ಅಡ್ಡಿಗಳು ಗೋಚರಿಸಲಿವೆ.
ಕುಂಭ
ಮನಸ್ಸು ಕೆಡಿಸುವ ಬೆಳವಣಿಗೆ. ಸಂಗಾತಿ ಜತೆ ಅಸಮಾಧಾನ. ವೃತ್ತಿಯಲ್ಲಿ ಎಡರುತೊಡರು ಎದುರಿಸುವಿರಿ. ಕೆಲವರ ಅಸಹಕಾರ ಉಂಟಾದೀತು.
ಮೀನ
ಅವಕಾಶಗಳು ನಿಮ್ಮ ಮುಂದಿವೆ. ಅವನ್ನು ಸದುಪಯೋಗ ಮಾಡುವ ಕಾರ್ಯ ನಿಮ್ಮದು. ಕಳೆದುದಕ್ಕೆ ಕೊರಗುತ್ತಾ ಉತ್ಸಾಹ ಕಳಕೊಳ್ಳದಿರಿ.



