June 22, 2026
Monday, June 22, 2026
spot_img

ಎರಡೇ ವರ್ಷಕ್ಕೆ ರಾಜೀನಾಮೆ ಕೊಟ್ಟ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ರಿಟನ್‌ನ ಪ್ರಧಾನಿಯಾದ ಎರಡೇ ವರ್ಷಕ್ಕೆ ಕೀರ್‌ ಸ್ಟಾರ್ಮರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂದು ಪ್ರಧಾನಿ ಸ್ಥಾನದಿಂದ ಸ್ಟಾರ್ಮರ್‌ ಕೆಳಕ್ಕೆ ಇಳಿದಿದ್ದಾರೆ.ಆಡಳಿತಾರೂಢ ಲೇಬರ್ ಪಕ್ಷದೊಳಗೆ ಅವರ ನಾಯಕತ್ವದ ವಿರುದ್ಧ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟಗೊಂಡಿತ್ತು. ಪಕ್ಷದ ಒಳಗಿನ ತೀವ್ರ ರಾಜಕೀಯ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.

ನನ್ನ ಸಂಸದೀಯ ಪಕ್ಷದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ನಾನು ಸರಿಯಾದ ವ್ಯಕ್ತಿಯೇ ಎಂಬ ಪ್ರಶ್ನೆ ಹುಟ್ಟಿತ್ತು. ಸ್ವಂತ ಗೌರವ ಹಾಗೂ ಪಕ್ಷದ ನಿರ್ಧಾರವನ್ನು ಸ್ವೀಕರಿಸಿದ್ದೇನೆ. ನಾನು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ನಾನು ಪ್ರೀತಿಸುವ ನನ್ನ ದೇಶವನ್ನು ಮೊದಲ ಸ್ಥಾನದಲ್ಲಿಟ್ಟು ಕೈಗೊಂಡ ನಿರ್ಧಾರಗಳಾಗಿದ್ದವು. ಇಂದಿನ ಬ್ರಿಟನ್ ದೇಶವು ಎರಡು ವರ್ಷಗಳ ಹಿಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ ಮತ್ತು ನ್ಯಾಯಯುತವಾಗಿದೆ. ನನ್ನ ನಂತರ ಬರುವ ಹೊಸ ಪ್ರಧಾನಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಮತ್ತು ಅಧಿಕಾರ ಹಸ್ತಾಂತರವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !