June 22, 2026
Monday, June 22, 2026
spot_img

‘ವಿದ್ಯುತ್ ವಲಯ ಕಾರ್ಪೊರೇಟ್ ಕೈಗೆ ಕೊಡಬೇಡಿ’: ಖಾಸಗೀಕರಣದ ವಿರುದ್ಧ ರೈತರ ಆಕ್ರೋಶ

ಹೊಸದಿಗಂತ ವರದಿ ಚಿತ್ರದುರ್ಗ:

ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗವು (ಏಇಖಅ) ವಿದ್ಯುತ್ ವಿತರಣಾ ಪರವಾನಿಗೆಯನ್ನು ಯಾವುದೇ ಖಾಸಗಿ ಕಂಪನಿಗೆ ಅಥವಾ ಟಾಟಾ ಪವರ್ ಕಂಪನಿಗೆ ನೀಡಬಾರದೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಿಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗವು (ಏಇಖಅ) ವಿದ್ಯುತ್ ವಿತರಣಾ ಪರವಾನಿಗೆಯನ್ನು ಖಾಸಗಿ ಕಂಪನಿಗೆ ಅಥವಾ ಟಾಟಾ ಪವರ್ ಕಂಪನಿಗೆ ನೀಡಲು ಮುಂದಾಗಿದೆ. ವಿದ್ಯುತ್ ಚ್ಛಕ್ತಿ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಿದರೆ ಮುಂದೆ ರೈತರು ಕೃಷಿ ಮಾಡಲು ಬಳಸುವ ನೀರಾವರಿ ಪಂಪ್ ಸೆಟ್ ಗಳಿಗೆ ಈಗ ನೀಡುತ್ತಿರುವ ವಿದ್ಯುತ್ ರದ್ದಾಗುವ ಸಾಧ್ಯತೆ ಸಾಧ್ಯತೆ ಇರುತ್ತದೆ. ನೀರಾವರಿ ಪಂಪ್ ಸೆಟ್ ಗಳಿಗೆ ಮೀಟರ್ ವ್ಯವಸ್ಥೆ ಜಾರಿ ಮಾಡಿ ಶುಲ್ಕ ನಿಗದಿ ಮಾಡುತ್ತಾರೆ. ಇದು ರೈತರ ಮೇಲೆ ಹೊರೆಯಾಗಿ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಟಾಟಾ ಪವರ್ ಕಂಪನಿಗೆ ಆಗಲಿ ಇನ್ನಾವುದೇ ಖಾಸಗಿ ಕಂಪನಿಗೆ ವಿದ್ಯುತ್ ವಿತರಣಾ ನೀಡಿದರೆ ಇದು ವಿದ್ಯುತ್ ವಲಯದ ಖಾಸಗೀಕರಣಕ್ಕೆ ನಾಂದಿಯಾಗಲಿದ್ದು ಭವಿಷ್ಯದಲ್ಲಿ ಸಾರ್ವ ವ್ಯವಸ್ಥೆಯನ್ನು ಹಾಗೂ ರೈತರ ಮೇಲೆ ಉಚಿತ ವಿದ್ಯುತ್ ಯೋಜನೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಟಾಟಾ ಪವರ್ ಕಂಪನಿಗೆ ಆಗಲಿ, ಇನ್ನಾವ ಹತ ಕಂಪನಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ನೀಡಿದರೆ ವಿದ್ಯುತ್ ಎನ್ನುವುದು ಖಾಸಗೀಕರರುತ್ತವಂತೆ ಇದರಿಂದ ಬಡಜನರಿಗೆ ಸಿಗುತ್ತಿರುವ ಉಚಿತ ಗೃಹಜ್ಯೋತಿ ಯೋಜನೆಗಳು ರದ್ದಾಗುವ ಸಂಭವವಿರುತ್ತದೆ ಎಂದು ದೂರಿದರು.

ಕರೆಂಟ್ ವಿದ್ಯುತ್ ಬಿಲ್ ಏರಿಕೆಯಾಗಿ ಉಚಿತ ವಿದ್ಯುತ್ ಯೋಜನೆಗಳು ರಾಗುವ ಸಂಭವವಿರುತ್ತದೆ. ಸರ್ಕಾರಿ ಕಂಪನಿಗಳಾದ ಬೆಸ್ಕಾಂ, ಎಸ್ಕಾಂ, ಮೆಸ್ಕಾಂ ಸಿ.ಇ.ಎಸ್.ಸಿ ಕಂಪನಿಗಳಲ್ಲಿರುವ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ಜೀವನ ನಿರ್ವಹಿಸಲು ತೊಂದರೆ ಯಾಗುತ್ತದೆ ಹಾಗೂ ಅವರ ಕುಟುಂಬಗಳು ನಿರ್ಗತಿಕರಾಗಿ ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ಆರೋಪಿಸಿದರು.

ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಿದೆ ಆದರೆ ಕಾರ್ಪೊರೇಟರ್ ಕಂಪನಿಗಳಿಗೆ ಲೂಟಿ ಮಾಡಿ ಕೊಳ್ಳಲು ಅವಕಾಶ ಮಾಡಿಕೊಟ್ಟಂತಿರುತ್ತದೆ ಹಾಗೂ ರೈತರ ಬದುಕು ನಾಶವಾಗುವ ಸಂಭವವಿರುತ್ತದೆ. ಉಚಿತ ವಿದ್ಯುತ್ ಯೋಜನೆಗಳು ಕೊನೆಯಾಗುವ ಸಂಭವವಿರುತ್ತದೆ. ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದರೆ ವಿದ್ಯುತ್ ಬೆಲೆ ದುಬಾರಿಯಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:

ಸರ್ಕಾರಿ ವಿದ್ಯುತ್ ಕಂಪನಿಗಳಲ್ಲಿರುವ ಮೀಸಲಾತಿ ರದ್ದಾಗುತ್ತದೆ ಹಾಗೂ ಇದರಿಂದ ದಲಿತರು. ಕೆಳ ವರ್ಗದ ಜನತೆಗೆ ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಎನ್ನುವುದು ಮರೀಚಿಕೆಯಾಗುವ ಸಂಭವವಿರುತ್ತದೆ. ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣೆ ಮಾಡಿದರೆ ಖಾಸಗಿ ಕಂಪನಿಗಳು ಗೃಹಬಳಕೆ ಹಾಗೂ ಇನ್ನಿತರ ಉದ್ದೇಶಕ್ಕೆ ವಿದ್ಯುತ್ ಪಡೆಯಲು ದುಬಾರಿ ವೆಚ್ಚವನ್ನು ಪಾವತಿಸಲು ಒತ್ತಾಯಪಡಿಸಿ ದೀನ ದಲಿತರು ರೈತರು, ಜನಸಾಮಾನ್ಯರು, ಮಹಿಳೆಯರಿಗೆ ಹೊರೆಯಾಗುವ ಸಂಭವಿಸುತ್ತದೆ ಎಂದರು.

ಉತ್ಪಷ್ಟವಾದ ಹಾಗೂ ಒಳ್ಳೆಯ ಸರ್ಕಾರಿ ಕಂಪನಿಗಳಿದ್ದರೂ ಖಾಸಗೀ ಕಂಪನಿಗಳಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ನೀಡುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿರುತ್ತದೆ ಇದರಿಂದ ಸರ್ಕಾರಿ ಕಂಪನಿಗಳು ನಾಶವಾಗುವ ಸಂಭವವಿರುತ್ತದೆ. ಯಾವುದೇ ಖಾಸಗೀ ಕಂಪನಿಗಳು ಲಾಭ ನೋಡುತ್ತವೆಯೇ ಹೊರತು ಸಾರ್ವಜನಿಕರು ರೈತರು, ದಲಿತರು. ಮಹಿಳೆಯರು, ಶೋಷಿತರ ಹಿತದೃಷ್ಟಿಯನ್ನು ನೋಡುವುದಿಲ್ಲ. ಸೇವೆ ಎನ್ನುವುದು ಗೌಣ ವಾಗುತ್ತದೆ ಎಂದು ಕಿಡಿಕಾರಿದರು.

ವಿದ್ಯುತ್ ಖಾಸಗೀಕರಣ ಮಾಡಿದರೆ, ಕರೆಂಟ್ ದರ ಏರಿಕೆ ಖಚಿತ, ಗೃಹ ಜ್ಯೋತಿ ಯೋಜನೆಗಳು ಬಂದ್, ನೇಮಕಾತಿಯಲ್ಲಿ ಮೀಸಲಾತಿ ರದ್ದು, ಹಳ್ಳಿಗಳು ಹಾಗೂ ಗ್ರಾಮಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಕೋಟ್ಯಾಂತರ ರೂಪಾಯಿ ಸರ್ಕಾರಿ ಹಾಗೂ ಸಾರ್ವಜನಿಕರ ಆಸ್ತಿ ಖಾಸಗಿ ಕಂಪನಿಗಳ ಪಾಲಾಗುವ ಸಂಭವವಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ಕೊಡಬಾರದು. ಒಂದು ವೇಳೆ ಖಾಸಗಿ ಕಂಪನಿಗಳಿಗೆ ಕೊಟ್ಟರೇ ಸರ್ಕಾರದ ವಿರುದ್ಧ ಉಗ್ರ ಹೊರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !