August 13, 2026
Thursday, August 13, 2026
spot_img

ಉಳ್ಳಾಲದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಉರುಳಿ ಬಿದ್ದ ವಲಸೆ ಕಾರ್ಮಿಕರು: ಓರ್ವನ ಸ್ಥಿತಿ ಗಂಭೀರ

ಹೊಸದಿಗಂತ ಉಳ್ಳಾಲ:


ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರಿಬ್ಬರು ಆಯತಪ್ಪಿ ಕೆಳಗೆ ಉರುಳಿ ಗಾಯಗೊಂಡ ಘಟನೆ ಮಂಗಳೂರು ನಗರದ ಹೊರವಲಯ ಇಲ್ಲಿನ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ನಡೆದಿದೆ.

ದಿಲ್ಲಿ ಮೂಲದ ಶಾಕೀರ್ (32) ಹಾಗೂ ಹೈದರ್ (33) ಗಾಯಗೊಂಡ ಕಾರ್ಮಿಕರು. ಈ ಪೈಕಿ ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ.

ಉಚ್ಚಿಲ ಅಜ್ಜಿನಡ್ಕ ಎಂಬಲ್ಲಿ ಹೋಲ್ ಸೇಲ್ ಬೇಕರಿ ಖಾದ್ಯ ತಯಾರಿಸುವ ತಮಿಳುನಾಡು ಮೂಲದ ವಿಜಿ ಸ್ವೀಟ್ಸ್ ಮಾಲಕ ಉದಯ ಕುಮಾರ್ ಎಂಬವರ ಮಾಲಕತ್ವದ ಬೀರಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಗುರುವಾರ ಮಧ್ಯಾಹ್ನ‌ ಘಟನೆ ನಡೆದಿದೆ.

ಐದು ಮಹಡಿಯ ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಶಾಕೀರ್ ಹಾಗೂ ಹೈದರ್ ಅವರು ಆಕಸ್ಮಿಕವಾಗಿ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಇಬ್ಬರೂ ಕಾರ್ಮಿಕರನ್ನ‌ ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಶಾಕೀರ್ ಸ್ಥಿತಿ ಗಂಭೀರವಾಗಿದೆ.

ಉಳ್ಳಾಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !