ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ನಿರ್ದೇಶಕ ಕೆ.ಸಿ. ಬೊಕಾಡಿಯಾ ಇತ್ತೀಚೆಗೆ ‘ಹಿಂದಿ ರಶ್’ ಸಂದರ್ಶನದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಅವರ ಸರಳತೆಯ ಅಪರೂಪದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕ್ಯಾಬ್ ಬುಕ್ ಮಾಡಿ ಶೂಟಿಂಗ್ ಸೆಟ್ಗೆ ಬಂದ ತಲೈವಾ!
ಚಿತ್ರೀಕರಣದ ದಿನವೊಂದರಲ್ಲಿ ತಲೈವಾ ರಜನಿಕಾಂತ್ ಅವರನ್ನು ಕರೆತರಲು ಸೆಟ್ನಿಂದ ಯಾರೂ ವಾಹನ ಕಳುಹಿಸಿರಲಿಲ್ಲ. ಸಾಧಾರಣವಾಗಿ ದೊಡ್ಡ ಸ್ಟಾರ್ ನಟರಾದರೆ ಈ ವಿಷಯಕ್ಕೆ ಕೋಪಗೊಳ್ಳುತ್ತಿದ್ದರು. ಆದರೆ, ರಜನಿಕಾಂತ್ ಅವರು ಯಾವುದೇ ಅಹಂ ಇಲ್ಲದೆ, ತಾವೇ ಸ್ವತಃ ಸಾಮಾನ್ಯ ಟ್ಯಾಕ್ಸಿ ಮಾಡಿಕೊಂಡು ಶೂಟಿಂಗ್ ಸ್ಪಾಟ್ಗೆ ಬಂದು ತಲುಪಿದರು.
ಡೈರೆಕ್ಟರ್ ಬಳಿ ಬಾಡಿಗೆ ಹಣ ಕೇಳಿದ ಸೂಪರ್ಸ್ಟಾರ್
ಸೆಟ್ಗೆ ಬಂದ ತಕ್ಷಣ ರಜನಿ ಅವರು ನೇರವಾಗಿ ನಿರ್ದೇಶಕರ ಬಳಿ ನಡೆದು ಬಂದರು. ಅತ್ಯಂತ ವಿನಮ್ರವಾಗಿ, “ನನ್ನನ್ನು ಕರೆತರಲು ಯಾರೂ ಬಾರದ ಕಾರಣ ಟ್ಯಾಕ್ಸಿಯಲ್ಲಿ ಬಂದಿದ್ದೇನೆ. ನನ್ನ ಬಳಿ ಹಣವಿಲ್ಲ, ದಯವಿಟ್ಟು ಆ ಕ್ಯಾಬ್ ಚಾಲಕನಿಗೆ ಬಾಡಿಗೆ ಹಣ ಪಾವತಿಸುತ್ತೀರಾ?” ಎಂದು ಮರ್ಯಾದೆಯಿಂದ ಕೇಳಿದರು. ಇಷ್ಟು ದೊಡ್ಡ ಸ್ಟಾರ್ ನಟನಿಗೆ ಕಿಂಚಿತ್ತೂ ಅಹಂಕಾರವಿಲ್ಲದ ಗುಣ ಕಂಡು ಇಡೀ ಸೆಟ್ ಆಶ್ಚರ್ಯಚಕಿತವಾಯಿತು.
ಮಾದರಿಯಾದ ರಜನಿ ಸರಳತೆ
ತಮಗೆ ಕಾರು ಕಳುಹಿಸದಿದ್ದಕ್ಕೆ ರಜನಿಕಾಂತ್ ಅವರು ನಿರ್ದೇಶಕರ ಮೇಲೆ ರೇಗಾಡಬಹುದಿತ್ತು. ಆದರೆ, ಪರಿಸ್ಥಿತಿಯನ್ನು ಅರಿತು ಅತ್ಯಂತ ನಮ್ರತೆಯಿಂದ ವರ್ತಿಸಿದ ಅವರ ಗುಣವೇ ಅವರನ್ನು ಇಂದು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ‘ಮಹಾನಾಯಕ’ನನ್ನಾಗಿ ಮಾಡಿದೆ ಎಂದು ಕೆ.ಸಿ. ಬೊಕಾಡಿಯಾ ಕೊಂಡಾಡಿದ್ದಾರೆ. ಈ ಸ್ಟೋರಿ ಈಗ ಸಿನಿಪ್ರೇಮಿಗಳ ಮನ ಗೆಲ್ಲುತ್ತಿದೆ.



