June 24, 2026
Wednesday, June 24, 2026
spot_img

ಮಲವಿಸರ್ಜನೆ ಮಾಡೋ ಸಮಯದಲ್ಲಿ ಕಷ್ಟಪಡ್ತೀರಾ? ಈ ಪದಾರ್ಥಗಳನ್ನು ಹೆಚ್ಚು ಸೇವಿಸಿ

ಆರೋಗ್ಯವೇ ಭಾಗ್ಯ ಅನ್ನೋ ಮಾತನ್ನು ಎಲ್ಲರ ಬಾಯಲ್ಲೂ ಕೇಳಿ ಕೇಳಿ ಅದು ಮಾಮೂಲಿ ವಾಕ್ಯ ಎಂದೆನಿಸಬಹುದು. ಆದರೆ ಒಂದು ದಿನ ಹುಷಾರು ತಪ್ಪಿದಾಗ ಆರೋಗ್ಯದ ಬೆಲೆ ಅರ್ಥವಾಗುತ್ತದೆ. ಇನ್ನು ಮಲಬದ್ಧತೆ ಮಾಮೂಲಿ ಎನಿಸಬಹುದು. ಆದರೆ ಒಂದು ದಿನ ವೈದ್ಯರು ನಿಮಗೆ ಪೈಲ್ಸ್‌ ಆಗಿದೆ ಆಪರೇಷನ್‌ ಮಾಡಬೇಕು ಎಂದಾಗ ಅದರ ಸೀರಿಯಸ್‌ನೆಸ್‌ ಅರ್ಥವಾಗುತ್ತದೆ. ಮಲಬದ್ಧತೆ ಅಥವಾ ಕಷ್ಟಪಟ್ಟು ಮಲವಿಸರ್ಜನೆ ಮಾಡುತ್ತೀರಿ ಎಂದಾದರೆ ನಿಮ್ಮ ಊಟದಲ್ಲಿ ಫೈಬರ್‌ ಇಲ್ಲ, ದೇಹಕ್ಕೆ ವ್ಯಾಯಾಮ ಇಲ್ಲ ಎಂದರ್ಥ. ಇಂದಿನಿಂದಲೇ ನಿಮ್ಮ ಡಯಟ್‌ ಬದಲಾವಣೆ ಮಾಡಿಕೊಳ್ಳಿ. ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿಕೊಳ್ಳಿ..

ನೀರು

ಮಲಬದ್ಧತೆ ಸಮಸ್ಯೆ ಬರುತ್ತಿದೆ ಎಂದಾದರೆ ಮೊದಲು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಎಷ್ಟು ನೀರು ಕುಡಿಯುತ್ತೀರೋ ಅದಕ್ಕಿಂತ ಒಂದು ಲೀಟರ್‌ ಹೆಚ್ಚಿಗೆ ನೀರು ಕುಡಿಯಿರಿ. ಮೂರರಿಂದ ನಾಲ್ಕು ಲೀಟರ್‌ ನೀರು ಕುಡಿಯುವುದು ಉತ್ತಮ.

ನಾರಿನಂಶ ಇರುವ ಆಹಾರ

ನಿಮ್ಮ ಕಣ್ಣಿಗೆ ಯಾವ ತರಕಾರಿ ಅಥವಾ ಹಣ್ಣಿನಲ್ಲಿ ನಾರಿನ ರೀತಿ ಕಾಣಿಸುತ್ತದೆಯೋ ಆ ಪದಾರ್ಥವನ್ನು ಸೇವಿಸಿ. ಹೀರೇಕಾಯಿ, ಮೂಲಂಗಿ, ಬೀನ್ಸ್‌, ಮಾವು, ಬಾಳೆಹಣ್ಣು, ಪಪಾಯ, ಸೇಬು ಹಾಗೂ ಪೇರಳೆ ಹಣ್ಣು. ಇನ್ನು ಡ್ರೈ ಫ್ರೂಟ್ಸ್‌ನಲ್ಲಿ ಒಣದ್ರಾಕ್ಷಿ ಹಾಗೂ ಅಂಜೂರ ತಿನ್ನಿ.

ವಾಕಿಂಗ್‌ ಮಾಡಿ

ತಿಂದಿದ್ದು ಅರಗಿದರೆ ತಾನೇ ಬಾತ್‌ರೂಮ್‌ ಹೋಗೋಕೆ ಆಗೋದು. ನಿತ್ಯವೂ ಯಾವುದಾದರೂ ಒಂದು ದೈಹಿಕ ಚಟುವಟಿಕೆ ರೂಢಿಮಾಡಿಕೊಳ್ಳಿ. ವಾಕಿಂಗ್‌, ಡ್ಯಾನ್ಸ್‌, ಯೋಗ, ಜಿಮ್‌, ಗೇಮ್ಸ್‌ ಯಾವುದಾದರೂ ಸರಿ ಓಡಾಟ ಮಾಡಿ.

ಶೌಚಾಲಯದ ಅಭ್ಯಾಸ

ಅರ್ಜೆಂಟ್‌ ಆದ ತಕ್ಷಣ ಅದನ್ನು ತಡೆಯದೇ ಆ ಸಮಯವೇ ಬಾತ್‌ರೂಮ್‌ಗೆ ಹೋಗಿ. ಸ್ಟೂಲ್‌ಮೇಲೆ ಪಾದ ಇಟ್ಟುಕೊಳ್ಳುವುದು ಅಥವಾ ಇಂಡಿಯನ್‌ ಶೈಲಿಯ ಬಾತ್‌ರೂಮ್‌ ಬಳಕೆ ಬೆಸ್ಟ್‌. ಇಷ್ಟೆಲ್ಲಾ ಮಾಡಿದರೂ ಕಷ್ಟ ಎಂದಾದರೆ ಲ್ಯಾಕ್ಸಟೀವ್ಸ್‌ ಬಳಕೆ ಮಾಡಬಹುದು. ಇದರಿಂದ ಮಲ ಗಟ್ಟಿಯಾಗುವುದು ತಪ್ಪುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !